ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ತೆಂಗು ಉತ್ಪಾದಕರ ಕಂಪನಿ ಮತ್ತು ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇದರ ಜಂಟಿ ಸಹಯೋಗದಲ್ಲಿ ಉಚಿತ ಕೃಷಿ ಮಾಹಿತಿ ಕಾರ್ಯಗಾರ ಮತ್ತು ಶೇರು ಪ್ರಮಾಣ ಪತ್ರ ವಿತರಣೆಯು ಜೈನ ಭವನದಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇದರ ತೋಟಗಾರಿಕಾ ವಿಜ್ಞಾನಿ ಡಾ.ರಶ್ಮೀ ಆರ್ ಮಾತನಾಡಿ, ಕರಾವಳಿಯಲ್ಲಿ ರೈತರು ತೆಂಗನ್ನು ಉಪ ಬೆಲೆಯನ್ನಾಗಿ ಮಾಡಿದ್ದು ತೆಂಗಿಗೆ ವಿಶೇ ಆಶಕ್ತಿ ನೀಡದೇ ಇರುವುದರಿಂದ ಇಳುವರಿ ಕಡಿಮೆಯಾಗಿದೆ. ತೆಂಗು ಕೃಷಿಯನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಿದಾಗ ಅಧಿಕ ಇಳುವರಿ ದೊರೆಯಲಿದೆ. ಸಮಗ್ರ ಪೋಷಕಾಂಶಗಳ ಕೊರತೆಯಿಂದ ನುಸಿ ರೋಗಗಳಂತ ಖಾಯಿಲೆಗಳು ಬಾದಿಸುತ್ತಿದೆ. ಈ ಭಾಗದಲ್ಲಿ ಮಣ್ಣಿಗೆ ಆವಶ್ಯಕವಾದ ಸಾರಜನಕ, ರಂಜಕ, ಪೊಟ್ಯಾಶ್ಗಳಂತ ಪ್ರಧಾನ ಪೋಷಕಾಂಶಗಳನ್ನು ನೀಡಬೇಕು. ಯಾವುದೇ ಬೆಳೆಗೂ ಮಣ್ಣು ಪರೀಕ್ಷೆ ಆವಶ್ಯಕವಾಗಿದ್ದು ಕನಿಷ್ಠ ಎರಡು ವರ್ಷಗಳಿಗೊಮ್ಮೆ ಮಣ್ಣು ಪರೀಕ್ಷೆ ಮಾಡುವ ಮೂಲಕ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿದಾಗ ಅಧಿಕ ಇಳುವಾರಿ ಪಡೆಯಲು ಸಾಧ್ಯ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಮಾತನಾಡಿ, ತೆಂಗಿನ ಮಾರುಕಟ್ಟೆ ಕುಸಿದಿದ್ದು ಮೌಲ್ಯ ವರ್ದನೆ ಮಾಡಬೇಕು. ಮೌಲ್ಯ ವರ್ಧನೆ ಮಾಡಿದರೆ ಒಂದು ಮರದಿಂದ ರೂ.೩೦೦೦-೫೦೦೦ ಆದಾಯ ಗಳಿಸಬಹುದು. ಇಪ್ಪತ್ತೈದು ಸಾವಿರ ಟನ್ ತೆಂಗಿನ ಕಾಯಿ ಬೆಳೆದರೂ ಸರಕಾರಿ ಖರೀದಿಗೆ ವ್ಯವಸ್ಥೆ ಕಲ್ಪಿಸಿಲ್ಲ. ತೆಂಗು ಖರೀದಿಸಲು ಒಂದೇ ಒಂದು ನಾಫೆಡ್ ಸಂಸ್ಥೆಯಿಲ್ಲ. ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದ ಆಗಿಲ್ಲ. ಇದಕ್ಕೆ ನಾವು ಒತ್ತಡ ಹಾಕಬೇಕಾಗಿದೆ. ಕೇಂದ್ರ ಸರಕಾರ ಕೊಬ್ಬರಿಗೆ ಕ್ವಿಂಟಾಲ್ಸ್ಗೆ ಕನಿಷ್ಠ ರೂ.೨೦,೦೦೦ ಬೆಂಬಲ ಬೆಲೆ ನಿಗದಿಪಡಿಸಬೇಕು ಹಾಗೂ ರಾಜ್ಯ ಸರಕಾರ ರೂ.೫೦೦೦ ಪ್ರೋತ್ಸಾಹ ಧನವಾಗಿ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಆಗ್ರಹಿಸಿ ಅ.೨ ರಿಂದ ತಿಪಟೂರಿನಿಂದ ರಾಜ ಭವನ ಚಲೋ ಪಾದಯಾತ್ರೆ ನಡೆಯಲಿದೆ. ಅ.೯ಕ್ಕೆ ಪ್ರೀಡಂ ಪಾರ್ಕ್ ನಲ್ಲಿ ಬೃಹತ್ ಕಲ್ಮಿನೇಷನ್ ನಡೆಯಲಿದ್ದು ರೈತರು ಸಹಕರಿಸುವಂತೆ ಅವರು ಮನವಿ ಮಾಡಿದರು.
ವಿಜಯ ಕರ್ನಾಟಕ ಸೂಪರ್ ಸ್ಟಾರ್ ಪ್ರಶಸ್ತಿ ಪುರಸ್ಕೃತ ಕೃಷಿಕ ಕಡಮಜಲಿ ಸುಭಾಸ್ ರೈ ಮಾತನಾಡಿ, ರೈತರು ಜ್ಞಾನ ಸಂಪಾದಿಸಿ ವಿಜ್ಞಾನಿಗಳಾಗಬೇಕು. ಲ್ಯಾಬ್ನಲ್ಲಿ ಆಗುವ ವಿಚಾರಗಳನ್ನು ಮಣ್ಣಿನಲ್ಲಿ ಪ್ರಯೋಗಿಸಿ ವಿಶೇಷ ಜ್ಞಾನ ಸಂಪಾದಿಸುವ ಮೂಲಕ ಪ್ರಾಕ್ಟಿಕಲ್ ವಿಜ್ಞಾನಿಗಳಾಗಬೇಕು. ತೆಂಗು ಉಪ ಬೆಳೆಯಾದರೂ ಅವುಗಳಲ್ಲಿ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿ ಅಧಿಕ ಲಾಭ ಗಳಿಸಬೇಕು. ಸರಕಾರಗಳ ಬೆಂಬಲ ಬೆಲೆಯ ಜೊತೆಗೆ ನಾವು ಇಂತಹ ಕಂಪನಿಗಳ ಮೂಲಕ ಹೋರಾಟ ಆಗಬೇಕು. ಬದುಕಿಗೆ ಪೂರಕವಾಗಿ ಸಮಗ್ರ ಕೃಷಿ ಮಾಡಿದಾಗ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದರು.
ಮಾನಸಗಂಗಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿನಾಯ ಎನ್.ಮಾತನಾಡಿ, ತೆಂಗು ಉತ್ಪಾದಕರ ಕಂಪನಿ ಹಾಗೂ ಮಾನಸಗಂಗಾ ಸಹಕಾರ ಸಂಸ್ಥೆಯು ಒಡಂಬಡಿಕೆ ಮಾಡಿಕೊಂಡಿದ್ದು ರೈತರಿಗೆ ಕೃಷಿ ಸಲಕರಣಗಳು, ರಸಗೊಬ್ಬರಗಳನ್ನು ಪೂರೈಸಲಾಗವುದು. ರೈತರಿಗೆ ನಮ್ಮ ಸಂಘದ ಮೂಲಕ ಕ್ಷಿಪ್ರ ಗತಿಯಲ್ಲಿ ಸಾಲ ಸೌಲಭ್ಯ ನೀಡಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ತೆಂಗು ಉತ್ಪಾದಕರ ಕಂಪನಿ ಅಧ್ಯಕ್ಷ ಕುಸುಮಾಧರ ಎಸ್.ಕೆ ಮಾತನಾಡಿ, ಸಂಸ್ಥೆ ಪ್ರಾರಂಭಗೊಂಡು ಎರಡು ವರ್ಷ ಪೂರೈಸಿದೆ. ಹದಿನಾಲ್ಕು ಸಾವಿರ ರೈತರನ್ನು ಹೊಂದಿರುವ ದೇಶದಲ್ಲೇ ಪ್ರಥಮ ಸಂಸ್ಥೆ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಂಪನಿಯ ಕಲ್ಪರಸ ಯೋಜನೆಗೆ ದೊಡ್ಡತೋಟದಲ್ಕಿ ಕಟ್ಟಡ ಸಿದ್ದವಾಗಿದೆ. ಗಣೇಶ ಚತುರ್ಥಿ ಬಳಿಕ ಖರೀದಿಸಲಾಗುವುದು. ಮೌಲ್ಯ ವರ್ಧನೆ ಮಾಡಿ ಉತ್ತಮ ಬೆಲೆ ಒದಗಿಸುವುದೇ ನಮ್ಮ ಉದ್ದೇಶ. ಕಲ್ಪ ಸಮೃದ್ದಿ ಯೋಜನೆಯಲ್ಲಿ ಠೇವಣಿಗೆ ಶೇ.೧೨ ಬಡ್ಡಿ ನೀಡಲಾಗುವುದು. ತೆಂಗಿನಕಾಯಿ ಕೀಳಲು ಜನ ಸಮಸ್ಯೆಗಳ ನಿವಾರಣೆ ಟೋಲ್ ಫ್ರೀಯ ಸಹಾಯವಾಣಿ ತೆರೆಯಲಾಗಿದೆ. ಸದಸ್ಯರ ಉತ್ತಮ ಯೋಜನಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳು ಮೂಲಕ ರೂ.೧೦೦ ಕೋಟಿ ತನಕ ಸಾಲ ಒದಗಿಸಲಾಗುವುದು ಎಂದರು.
ನಿರ್ದೇಶಕಿ ಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶೇರು ಪ್ರಮಾಣ ಪತ್ರ ವಿತರಣೆ:
ಕಾರ್ಯಕ್ರಮದಲ್ಲಿ ಸದಸ್ಯ ರೈತರಾದ ಎ.ಜತೀಂದ್ರ ಶೆಟ್ಟಿ, ಜಗನ್ನಾಥ ರೈ ಡಿ., ಐತ್ತಪ್ಪ ನಾಯ್ಕ್, ಆಯಿಷಾ, ದುಗ್ಗಪ್ಪ ಗೌಡ, ಐತ್ತಪ್ಪ ರೈಯವರಿಗೆ ಶೇರು ಪ್ರಮಾಣ ಪತ್ರ ವಿತರಿಸಲಾಯಿತು.
ನಿಶ್ಮಿತಾ ಪ್ರಾರ್ಥಿಸಿದರು. ನಿರ್ದೇಶಕ ಗಿರಿಧರ್ ಸ್ವಾಗತಿಸಿದರು. ನಿರ್ದೇಶಕಿ ಲತಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೇತನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಾ.ರಾಜೇಶ್ ಬೆಜ್ಜಂಗಳ ಕಾರ್ಯಕ್ರಮ ನಿರೂಪಿಸಿದರು. ಸುಳ್ಯ ಕಚೇರಿ ಮೇಲ್ವಿಚಾರಕಿ ಅಪರ್ಣಾ ವಂದಿಸಿದರು.


























