ಪುತ್ತೂರು : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಛೋಟಾ ಚಾಂಪಿಯನ್ ಮಕ್ಕಳ ಗೇಮ್ ಶೋನ ಗ್ರ್ಯಾಂಡ್ ಫಿನಾಲೆ ಗೆ ಶಿವಾಂಶ್ ಕಾಮತ್ ಆಯ್ಕೆಯಾಗಿರುತ್ತಾರೆ.

ಈಗಾಗಲೇ 2ನೇ ಎಪಿಸೋಡ್ ನಲ್ಲಿ ಕಾಣಿಸಿಕೊಂಡಿರುವ ಶಿವಾಂಶ್- ರಾ ರಾ ರಕ್ಕಮ್ಮ ಹಾಡು ಹಾಗೂ ಹುಲಿ ನೃತ್ಯದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ.
ಈವರೆಗೆ ಭಾಗವಹಿಸಿದ 80 ಮಕ್ಕಳಲ್ಲಿ ಕೇವಲ 8 ಪುಟಾಣಿಗಳನ್ನು ಫಿನಾಲೆಗೆ ಆಯ್ಕೆ ಮಾಡಿದ್ದು, ಅದರಲ್ಲಿ ಶಿವಾಂಶ್ ಕೂಡಾ ಒಬ್ಬ.
ತುಮಕೂರಿನಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಪುಟಾಣಿ ಭಾಗವಹಿಸಿದ್ದು- ಇದೇ ಶನಿವಾರ ಮತ್ತು ಆದಿತ್ಯವಾರದಂದು ಸಾಯಂಕಾಲ 6-00 ರಿಂದ 7-30 ರವರೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ.
ಶಿವಾಂಶ್ ಪುರುಷರಕಟ್ಟೆಯ ನಾಗೇಶ್ ನಾಯಕ್ ಮತ್ತು ವಿದ್ಯಾ ನಾಯಕ್ ದಂಪತಿಗಳ ಮೊಮ್ಮಗ. ಗಾಯಕಿ ಗುರುಪ್ರಿಯ ನಾಯಕ್, ಶಿವಾನಂದ ಕಾಮತ್ ದಂಪತಿಗಳ ಪುತ್ರ.























