ವಿಟ್ಲ : ಸರಕಾರಿ ಪ್ರೌಢಶಾಲೆ (ಆರ್.ಎಂ.ಎಸ್.ಎ) ಶಾಲೆಯ ತರಗತಿ ಕಿಟಕಿಗಳಿಗೆ ಕಿಡಿಗೇಡಿಗಳು ಹಾನಿ ಮಾಡಿದ ಬಗ್ಗೆ ವರದಿಯಾಗಿದೆ.

ಸ.4 ರಂದು ಬೆಳಿಗ್ಗೆ ಶಾಲಾ ಶಿಕ್ಷಕರು, ಮಕ್ಕಳು ದೈನಂದಿನಂತೆ ಶಾಲೆಗೆ ಬಂದ ವೇಳೆ ಘಟನೆ ಬೆಳಕಿಗೆ ಬಂದಿದೆನ್ನಲಾಗಿದೆ.
ಸ.3 ರಂದು ಶಾಲಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾಟ ನಡೆದಿದ್ದು, ಬಳಿಕ ಯಾರೋ ಕಿಡಿಗೇಡಿಗಳು ಈ ದುಷ್ಕ್ರತ್ಯವೆಸಗಿದ್ದಾರೆನ್ನಲಾಗಿದೆ.
ಕಿಟಕಿಗಳಿಗೆ ಹಾನಿ ಮಾಡಿದ್ದು, ಮಾತ್ರವಲ್ಲದೇ, ಶಾಲಾ ಆವರಣದಲ್ಲಿಯೂ ಗಲೀಜು ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


























