ಚಂದ್ರಯಾನ-3 ಸೇರಿದಂತೆ ಇಸ್ರೋ ರಾಕೆಟ್ಗಳ ಲಾಂಚಿಂಗ್ ವೇಳೆ ಕೌಂಟ್ಡೌನ್ ಕೊಡುತ್ತಿದ್ದ (ಧ್ವನಿ ಕೊಡುತ್ತಿದ್ದ) ವಲರ್ಮತಿ ಇನ್ನಿಲ್ಲ. ಇಸ್ರೋ ಮಹಿಳಾ ವಿಜ್ಞಾನಿ ಕಾರ್ಡಿಯಕ್ ಅರೆಸ್ಟ್ನಿಂದ ಚೆನ್ನೈ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಭಾರತೀಯ ಬಾಹ್ಯಾಕಾಶ ಕೇಂದ್ರ (ಇಸ್ರೋ)ದಲ್ಲಿ ಮಹಿಳಾ ವಿಜ್ಞಾನಿಯಾಗಿದ್ದ ವಲರ್ಮತಿ ಅವರು ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಕಾರ್ಡಿಯಕ್ ಅರೆಸ್ಟ್ ಕಾಣಿಸಿಕೊಂಡಿದ್ದರಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ರಾಕೆಟ್ ಉಡಾವಣೆ ಮಾಡುವ ಕೊನೆ ಸಮಯದಲ್ಲಿ ಇವರು ಕೌಂಟ್ಡೌನ್ ಕೊಡುತ್ತಿದ್ದರು. ಇದು ಎಲ್ಲರಲ್ಲೂ ಭಾರೀ ಕುತೂಹಲವನ್ನು ಮೂಡಿಸುತ್ತಿತ್ತು. ಸದ್ಯ ಆ ಧ್ವನಿಯನ್ನು ನಾವು ಇನ್ನು ಮುಂದೆ ಕೇಳಲು ಸಾಧ್ಯವಿಲ್ಲ. ಇನ್ನು, ಜುಲೈ 14 ರಂದು ಚಂದ್ರಯಾನ-3 ಲಾಂಚ್ ಮಾಡುವ ವೇಳೆ ಇವರು ಕೊನೆ ಬಾರಿ ಕೌಂಟ್ಡೌನ್ ಕೊಟ್ಟಿದ್ದರು.


























