ವಿಟ್ಲ : ಪುತ್ತಿಲ ಪರಿವಾರ ಮಾಮೇಶ್ವರ ಘಟಕ ಕೆಸರ್ಡೊಂಜಿ ದಿನ ಕಾರ್ಯಕ್ರಮ ನಡೆಸಿ ಉಳಿಕೆಯಾದಂತಹ ಮೊತ್ತವನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ರವರ ಮಾರ್ಗದರ್ಶನದಂತೆ ಬಡಕುಟುಂಬಗಳಿಗೆ ಧನ ಸಹಾಯ ನೀಡಲಾಯಿತು.
ಜನಾರ್ಧನ ಗೌಡ ನೆಕ್ಕಿಲಾರ್, ಮೋಹನ್ ಪೂಜಾರಿ ಇರುಂದೂರು, ಪ್ರಮೋದ್ ಅವೆತ್ತಿಕಲ್ಲು ಕುಟುಂಬಕ್ಕೆ ಧನ ಸಹಾಯ ಮಾಡುವ ಮೂಲಕ ಅವರ ಆರ್ಥಿಕ ಸಂಕಷ್ಟಕ್ಕೆ ಪುತ್ತಿಲ ಪರಿವಾರ ಮಾಮೇಶ್ವರ ಘಟಕ ನೆರವಾದರು.
ಈ ವೇಳೆ ಪುತ್ತಿಲ ಪರಿವಾರ ಮಾಮೇಶ್ವರ ಘಟಕದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.




























