ವಿಟ್ಲ : ವಿಧಾನ ಸಭಾ ಚುನಾವಣೆಯ ನಂತರ 15ನೇ ಹಣಕಾಸಿನ ಉಳಿಕೆ ಮೊತ್ತವನ್ನು ಮತ್ತು ಅಮೃತ ನಗರೋತ್ಥಾನದ ಭಾಗ 4ರ ಕ್ರಿಯೋ ಯೋಜನೆಯ ಅನುದಾನವನ್ನು ಬದಲೀ ಕಾಮಗಾರಿಗಳಿಗೆ ಉಪಯೋಗಿಸಿ ಈ ವಿಚಾರವನ್ನು ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 12 ಜನ ಬಿಜೆಪಿ ಸದಸ್ಯರ ಗಮನಕ್ಕೆ ತರದೆ, ಅವರನ್ನು ನಿರ್ಲಕ್ಷಿಸುವ ಮೂಲಕ ಬೇಜವಾಬ್ದಾರಿ ತೋರಿದ್ದಾರೆಂದು ಆರೋಪಿಸಿ ಅಧಿಕಾರಿಗಳು ಹಾಗೂ ಶಾಸಕರ ವಿರುದ್ಧ ಪಟ್ಟಣ ಪಂಚಾಯತ್ನ ಬಿಜೆಪಿ ಸದಸ್ಯರಿಂದ ವಿಟ್ಲ ಪಟ್ಟಣ ಪಂಚಾಯತ್ನ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ಈ ಹಿಂದೆಯೂ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳಿಗೆ, ಆಡಳಿತಾಧಿಕಾರಿಯವರಿಗೆ, ತಹಶೀಲ್ದಾರರಿಗೆ, ಮುಖ್ಯಾಧಿಕಾರಿಗಳಿಗೆ ಹಾಗೂ ಶಾಸಕರಿಗೆ ಮನವಿ ನೀಡಲಾಗಿದೆ. ಆದರೆ ಈ ಬಗ್ಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳು, ಶಾಸಕರು ಸ್ಪಂದನೆ ನೀಡಿಲ್ಲ ಎಂದು ಪಟ್ಟಣ ಪಂಚಾಯತ್ ಸದಸ್ಯರು ಆರೋಪಿಸಿದ್ದಾರೆ.
ಮುಖ್ಯಾಧಿಕಾರಿ ಹಾಗೂ ಆಡಳಿತಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸದಸ್ಯರಾದ ಅಶೋಕ್ ಕುಮಾರ್ ಶೆಟ್ಟಿ, ಅರುಣ್ ವಿಟ್ಲ, ಕರುಣಾಕರ ನಾಯ್ತೋಟ್ಟು, ಯನ್. ಕೃಷ್ಣ, ಸಿ.ಹೆಚ್. ಜಯಂತ, ವಸಂತ, ಸಂಗೀತ, ವಿಜಯಲಕ್ಷ್ಮೀ, ರಕ್ಷಿತಾ, ಸುನೀತಾ ಉಪಸ್ಥಿತರಿದ್ದರು.



























