ಪುತ್ತೂರು : ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಲೋಕ ಕಲ್ಯಾಣಾರ್ಥ ಹಾಗೂ ಸಾನಿಧ್ಯವೃದ್ದಿಗಾಗಿ ಸೆಪ್ಟೆಂಬರ್ 2ರಿಂದ ಆರಂಭವಾದ “ಏಕಾದಶ ಕೋಟಿ ಮಹಾಲಿಂಗೇಶ್ವರ ಜಪಯಜ್ಞ” ದ ಅಂಗವಾಗಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರು, ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳಿಂದ ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ಏಕಾದಶಾಕ್ಷರಿ ಮಂತ್ರ ಪಠಣ ನಡೆಯಿತು.



ಹಿರಿಯ ಶಿಕ್ಷಕಿಯರಾದ ಪುಷ್ಪಲತಾ.ಬಿ.ಕೆ ಹಾಗೂ ಸಾಯಿಗೀತಾ.ಎಸ್. ರಾವ್ ಜಪದ ಮಹತ್ವ ಹಾಗೂ ಕ್ರಮವನ್ನು ತಿಳಿಸಿದರು.
























