ವಿಟ್ಲ : ಪಾಂಡುರಂಗ ವಿಠಲ ಮಂದಿರದ ಮುಖ್ಯಸ್ಥರಾದ ವಿಷ್ಣು ಮೂರ್ತಿ ಕೆದಿಲಾಯ (82) ರವರು ನಿಧನರಾದರು.

ವಿಷ್ಣು ಮೂರ್ತಿ ಕೆದಿಲಾಯ ರವರು ಉಡುಪಿಯ ಪೇಜಾವರ ಮಠದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು. ಭಾರತ ಪರಿಕ್ರಮ ಯಾತ್ರೆ ಕೈಗೊಂಡಿದ್ದ ಸೀತಾರಾಮ ಕೆದಿಲಾಯ ಅವರ ಹತ್ತಿರದ ಸಂಬಂಧಿಯಾಗಿದ್ದರು.
ಮೃತರು ಪುತ್ರ ಕೀರ್ತನ್ ಕೆದಿಲಾಯ, ಪುತ್ರಿ ಅನುಪಮ ಕೆದಿಲಾಯ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

























