ಪುತ್ತೂರು : ವಿಜಯ ಸಾಮ್ರಾಟ್ ಪುತ್ತೂರು ಇದರ ಆಶ್ರಯದಲ್ಲಿ ಸಹಜ್ ರೈ ನೇತೃತ್ವದಲ್ಲಿ “ಪುತ್ತೂರುದ ಪಿಲಿಗೊಬ್ಬು-2023” ಆ.22 ರಂದು ನಡೆಯಲಿದೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಡವರ ಸಂಕಷ್ಟಗಳಿಗೆ ಸ್ಪಂದಿಸುತ್ತಾ ಸೇವಾ ಕಾರ್ಯಗಳನ್ನು ಮಾಡುತ್ತಿರುವ “ವಿಜಯ ಸಾಮ್ರಾಟ್” ಮೊದಲ ಬಾರಿಗೆ “ಪುತ್ತೂರುದ ಪಿಲಿಗೊಬ್ಬು-2023” ಬೃಹತ್ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ.
ಸ್ಪರ್ಧೆಯಲ್ಲಿ ಆಹ್ವಾನಿತ ತಂಡಗಳಿಂದ ಹುಲಿವೇಷ ಕುಣಿತ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ 8762669027, 9901201500, 9591063207 ಅನ್ನು ಸಂಪರ್ಕಿಸಬಹುದಾಗಿದೆ.
























