ಪುತ್ತೂರು : ವಿಶ್ವ ಹಿಂದೂ ಪರಿಷತ್ ಬಜರಂಗದಳ ಕೆಯ್ಯೂರಿನ ಕಾರ್ಯಕರ್ತರು ‘ಗೋವಿಗಾಗಿ ಮೇವು’ ಎಂಬ ವಿಶೇಷ ಪರಿಕಲ್ಪನೆಯೊಂದಿಗೆ ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಗೋಶಾಲೆಗೆ ಬೇಕಾದ ಹಸಿರು ಹುಲ್ಲನ್ನು ಸಂಗ್ರಹಿಸಿ, ಈಶ್ವರಮಂಗಲದ ಹನುಮಗಿರಿ ಗೋಶಾಲೆಗೆ ಹಾಗೂ ಕೊಡಿಪ್ಪಾಡಿಯ ಓಜಾಲ ಮುಳಿಯ ಗೋವಿಹಾರಕ್ಕೆ ನೀಡಿದರು.