ಸುಳ್ಯ : ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ಸರಕಾರ ರಚಿಸಿ, ಈ ಕೂಡಲೇ ಜಾರಿಗೆ ಬರುವಂತೆ ಆದೇಶಿಸಿದೆ.
ಈ ಸಮಿತಿಯ ಅಧ್ಯಕ್ಷರಾಗಿ ಶಾಸಕರಾದ ಭಾಗೀರಥಿ ಮುರುಳ್ಯ ಹಾಗೂ ಸದಸ್ಯರಾಗಿ ರಾಕೇಶ್ ರೈ ಕೆಡೆಂಜಿ, ಭಾರತಿ ಉಳುವಾರು ಹಾಗೂ ಜಗದೀಶ್ ದಾಸನಕಜೆ ಹಾಗೂ ಸದಸ್ಯ ಕಾರ್ಯದರ್ಶಿಯಾಗಿ
ತಹಶೀಲ್ದಾರ್ ಅವರನ್ನು ನೇಮಕಗೊಳಿಸಿ ಆದೇಶ ಮಾಡಿದೆ.

ಸುಳ್ಯ ಕಾಂಗ್ರೆಸ್ ನ ಆಂತರಿಕ ಕಲಹದಿಂದಾಗಿ ಅಕ್ರಮ ಸಕ್ರಮ ಸಮಿತಿಯ ಸದಸ್ಯರಾಗುವ ಭಾಗ್ಯ ಬಿಜೆಪಿ ಪಾಲಾಗಿದೆ.


























