ವಿಟ್ಲ : ಅಧ್ಯಾಪಕರ ಸಹಕಾರಿ ಸಂಘ (ನಿ) ವಿಟ್ಲ ಇದರ ವಾರ್ಷಿಕ ಮಹಾಸಭೆಯ ಸಂಘದ ಅಧ್ಯಕ್ಷರಾದ ರಮೇಶ್ ನಾಯಕ್ ಕೆ. ಇವರ ಅಧ್ಯಕ್ಷತೆಯಲ್ಲಿ ವಿಟ್ಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾದ ರಮೇಶ ನಾಯಕ್ ಕೆ ಇವರು ಮಹಾಸಭೆಗೆ ಬಂದ ಸದಸ್ಯರನ್ನು ಸ್ವಾಗತಿಸಿ, ಅಧ್ಯಕ್ಷ ಭಾಷಣವನ್ನು ಮಾಡಿದರು.

ಸಂಘವು ವರದಿ ಸಾಲಿನಲ್ಲಿ 538 ಕೋಟಿ ವ್ಯವಹಾರ ನಡೆಸಿ 1.01 ಕೋಟಿ ಲಾಭ ಗಳಿಸಿದೆ. 5.42 ಕೋಟಿ ರೂಪಾಯಿ ಬಂಡವಾಳ, 183 ಕೋಟಿ ಠೇವಣಿ ಹೊಂದಿದ್ದು. 168.06 ಕೋಟಿ ಹೊರಬಾಕಿ ಸಾಲ ಇದ್ದು ಸದಸ್ಯರಿಗೆ ಶೇಕಡಾ 11% ಡಿವಿಡೆಂಡ್ ಘೋಷಿಸಲಾಗಿದೆ.
ಸಂಘವು ಪ್ರಗತಿ ಫಥದಲ್ಲಿ ಮುನ್ನಡೆಯಲು ಸದಸ್ಯರ ಮತ್ತು ಗ್ರಾಹಕರ ಸಹಕಾರದಿಂದ ಸಾಧ್ಯವಾಗಿದೆ. 2022-23ನೇ ಸಾಲಿನಲ್ಲಿ ಅತೀ ಹೆಚ್ಚು ಅಂಕಗಳಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನವನ್ನು ನೀಡಿ ಗೌರವಿಸಲಾಯಿತು ಹಾಗೂ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಸಂಘದ ಸದಸ್ಯ ಶಿಕ್ಷಕರನ್ನು ಗೌರವಿಸಲಾಗಿತ್ತು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಉಮನಾಥ ರೈ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾ ಅಧ್ಯಕ್ಷರಾದ ಶಿವಪ್ರಸಾದ್ ಇವರು ಉಪಸ್ಥಿತರಿದ್ದರು.
ಉಪಾಧ್ಯಕ್ಷರಾದ ರಾಜೇಂದ್ರರೈ ಧನ್ಯವಾದ ಸಮರ್ಪಿಸಿದರು ಹಾಗೂ ನಿರ್ದೇಶಕರಾದ ಮೋನಪ್ಪ ಕೆ, ಡಾ. ನವೀನ್‌ಕೊಣಾಜೆ, ಕಮಲಾಕ್ಷ, ಚಿತ್ರಕಲಾ ಕೆ, ಸಂಜೀವ ಎಚ್, ಸುರೇಶಕುಮಾರ್ ಪಿ.ಎಮ್., ಇಂದುಶೇಖರ್, ಜಯರಾಮ, ರಾಮಕೃಷ್ಣರಾವ್, ಕೆ. ಗಂಗಾಧರ ಆಳ್ವ, ಪುಷ್ವರಾಜ್ ಬಿ, ಉಮ್ಮರಗಿ ಶರಣಪ್ಪ, ಅನಿತಾ ಮಿನೇಜಸ್, ನವೀನ್ ಪಿ.ಎಸ್. ಭಾರತಿ ಉಪಸ್ಥಿತರಿದ್ದರು.
ಸಂಘದ ಜನರಲ್ ಮೆನೇಜರ್ ಸುಚಿನ್‌ರಾಜ್ ಶೆಟ್ಟಿ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು. ಸಂಘದ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.


























