ಪುತ್ತೂರು : ವಾಣಿಜ್ಯ ಮತ್ತು ಕೈಗಾರಿಕಾ ಸಂಘದ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಮತ್ತು ನಿರ್ದೇಶಕರುಗಳ ಆಯ್ಕೆ ನಡೆಯಿತು.
ಸೆ.10 ರಂದು ಬಪ್ಪಳಿಗೆ ರಾಧಾಕೃಷ್ಣ ಮಂದಿರ ರಸ್ತೆ ಬಳಿಯ ರೋಟರಿ ಮನೀಷಾ ಸಭಾಂಗಣದಲ್ಲಿ ಜರಗಿದ ಸಂಘದ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ನೂತನ ಪದಾಧಿಕಾರಿಗಳು:
ಸಂಘದ ನೂತನ ಅಧ್ಯಕ್ಷರಾಗಿ ದರ್ಬೆ ಗಣೇಶ್ ಟ್ರೇಡರ್ಸ್ ಮಾಲಕ ಪಿ. ವಾಮನ ಪೈ, ಪ್ರಧಾನ ಕಾರ್ಯದರ್ಶಿಯಾಗಿ ಸುದರ್ಶನ್ ಎಂಟರ್‌ಪ್ರೈಸಸ್‌ನ ಮಾಲಕ ಮನೋಜ್ ಟಿವಿ, ಕೋಶಾಧಿಕಾರಿಯಾಗಿ ಮೋಹನ್ ಕೋಲ್ಡ್ ಹೌಸ್‌ನ ರಾಜೇಶ್ ಕಾಮತ್, ಉಪಾಧ್ಯಕ್ಷರುಗಳಾಗಿ ಮಿತ್ತಳಿಕೆ ಆರ್ಕೆಡ್‌ನಲ್ಲಿರುವ ಪದ್ಮ ಟ್ರೇಡರ್ಸ್ ನ ಎಮ್. ಸೂರ್ಯನಾಥ ಆಳ್ವ, ವಿವಿಧ್ ಎನರ್ಜಿ ಸಿಸ್ಟಮ್‌ನ ರವಿಕೃಷ್ಣ ಡಿ. ಕಲ್ಲಾಜೆ, ಕಾರ್ಯದರ್ಶಿಗಳಾಗಿ ಬೊಳ್ವಾರು ಅಮಾನ್ ಟ್ರೇಡರ್ಸ್ ನ ಮಹಮ್ಮದ್ ನೌಶಾದ್ ಹಾಜಿ ಹಾಗೂ ಮಾರ್ಕ್ ಟೆಲಿಕಾಮ್‌ನ ಶಶಿರಾಜ್ ರೈ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಿರ್ದೇಶಕರುಗಳಾಗಿ ಕಾವೇರಿ ಎಂಟರ್‌ಪ್ರೈಸಸ್‌ನ ಶ್ರೀಕಾಂತ್ ಕೊಳತ್ತಾಯ, ಸೇಡಿಯಾಪು ಆಗ್ರೋ ಸೇಲ್ಸ್‌ನ ವಿಶ್ವಪ್ರಸಾದ್ ಸೇಡಿಯಾಪು, ಅಶ್ವಿಜಾ ಎಂಟರ್‌ಪ್ರೈಸಸ್‌ನ ಪಿ. ಉಲ್ಲಾಸ್ ಪೈ, ಕುಲ್ಯಾಡಿಕಾರ್ ನ ಆರ್. ರಾಮಚಂದ್ರ ನಾಯಕ್, ಶಾಸ್ತ್ರಿ ಆ್ಯಂಡ್ ಕಂ.ಯ ಕೆ. ಸೀತಾರಾಮ್ ಶಾಸ್ತ್ರಿ. ಫಾಯಿದ ಟ್ರೇಡರ್ಸ್ ನ ಉಮರ್ ಫಾರೂಕ್, ಮೇಘ ಸೆಂಟರ್‌ನ ಆಸ್ಕರ್ ಆನಂದ್, ಅಶ್ಮಿ
ಟವರ್‌ನ ಸಂತೋಷ್ ಶೆಟ್ಟಿ, ವಿನ್ನರ್ ಸಾಫ್ಟ್ ಡ್ರಿಂಕ್ಸ್‌ನ ರಮೇಶ್ ಪ್ರಭು, ಮುಳಿಯ ಜುವೆಲ್ಸ್‌ನ ಕೃಷ್ಣ ನಾರಾಯಣ ಮುಳಿಯ, ದರ್ಬೆ ಶ್ರೀರಾಮ ಸೌಧದ ಉಮೇಶ್ ನಾಯಕ್, ಲ್ಯಾಂಡ್ ಲಿಂಕ್‌ನ ಸದಾನಂದ ನಾಯ್ಕ್, ಮಣಿಲಾ ಕನ್ಸ್ಟ್ರಕ್ಷನ್ ಮತ್ತು ಆಗ್ರೋ ಸೇಲ್ಸ್ ನ ಮಹಾದೇವ ಶಾಸ್ತ್ರಿ, ಆರ್‌ಎಚ್. ಸೆಂಟರ್‌ನ ಗೋಪಾಲ ಎಂ.ಯು., ಮೋಹನ್ ಗ್ರಾಫಿಕ್ ನ ಮೋಹನ್ ಎಂ, ಹಾಗೂ ಪ್ರಸನ್ನ ಪ್ರೆಸ್‌ನ ಗುರುರಾಜ್ ಕೆ.ರವರು ಆಯ್ಕೆಯಾಗಿದ್ದಾರೆ.
ಸಂಘದ ಮಾಜಿ ಅಧ್ಯಕ್ಷ ಯು. ಲೋಕೇಶ್ ಹೆಗ್ಡೆ ಚುನಾವಣಾಧಿಕಾರಿಯಾಗಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ನಿರ್ಗಮಿತ ಅಧ್ಯಕ್ಷರಾದ ಜಾನ್ ಕುಟಿನ್ಹಾ ರವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು.
100 ವರ್ಷಕ್ಕೂ ಮಿಕ್ಕಿ ಉದ್ಯಮದಲ್ಲಿರುವ, ಪಿ. ಗೋಪಾಲ ಪೈ ಸ್ಥಾಪಿತ ಪುತ್ತೂರಿನ ಪ್ರಸಿದ್ಧ ಪಿ.ಸಿ. ಪೈ ಬ್ರದರ್ಸ್ ಸಮೂಹ ಸಂಸ್ಥೆಗಳ 3ನೇ ತಲೆಮಾರಿನ ಸದಸ್ಯರಾದ ವಾಮನ ಪೈ ರವರು ದರ್ಬೆಯಲ್ಲಿರುವ ಗಣೇಶ್ ಟ್ರೇಡರ್ ಮತ್ತು ಉಜಿರೆಯಲ್ಲಿರುವ ಪಿ.ಸಿ.ಪೈ ಪೆಟ್ರೋಲ್ ಪಂಪ್‌ನ ಆಡಳಿತ ಪಾಲುದಾರರಾಗಿದ್ದಾರೆ.
ನೆಹರೂನಗರ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಸಮಿತಿ ನಿರ್ದೇಶಕರಾಗಿ, ದ.ಕ. ಮತ್ತು ಉಡುಪಿ ಜಿಲ್ಲಾ ಪೆಟ್ರೋಲಿಯಂ ಡೀಲರ್ಸ್ ಆಸೋಸಿಯೇಶನ್ ಅಧ್ಯಕ್ಷರಾಗಿ, ಪುತ್ತೂರು ಜೆಸಿಐ ಅಧ್ಯಕ್ಷರಾಗಿ, ಪುತ್ತೂರು ರೋಟರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು ಪ್ರಸ್ತುತ ಪುತ್ತೂರು ಜಿಎಸ್‌ಬಿ ಸಭಾದ ಅಧ್ಯಕ್ಷರಾಗಿದ್ದಾರೆ.


























