ವಿಟ್ಲ ಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಮೊಸರು ಕುಡಿಕೆ ಉತ್ಸವ ಸಮಿತಿ, ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘ ಹಾಗೂ ಶ್ರೀವರ ಯುವಕ ಮಂಡಲ (ರಿ) ಪೂರ್ಲಪ್ಪಾಡಿ ಇದರ ಸಹಯೋಗದಲ್ಲಿ 21ನೇ ವರ್ಷದ ಮೊಸರು ಕುಡಿಕೆ ಉತ್ಸವವು ಪೂರ್ಲಪ್ಪಾಡಿ ಅಂಗನವಾಡಿ ಕೇಂದ್ರದ ವಠಾರದಲ್ಲಿ ನಡೆಯಿತು.

ಮೋನಪ್ಪ ಪೂಜಾರಿ ಪೂರ್ಲಪ್ಪಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಅನಂತರ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಸಂಜೆ ಬಹುಮಾನ ವಿತರಣಾ ಸಮಾರಂಭ ವಿಟ್ಲಪಡ್ನೂರು ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷರಾದ ರವೀಶ್ ಶೆಟ್ಟಿ ಕರ್ಕಳ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಅತಿಥಿಗಳಾಗಿ ಗ್ರಾಮ ಪಂ. ಅಧ್ಯಕ್ಷರಾದ ಜಯಂತ್ ಪೂರ್ಲಪ್ಪಾಡಿ, ಜಗದೀಶ್ ರೈ ಪನಡ್ಕ, ಗಂಗಾಧರ ಗೌಡ ಕಾಣಿಚ್ಚಾರ್, ಜಯಾನಂದ ದೇವರಮನೆ, ವಿದ್ಯಾ ಕೆ ಎನ್ ಪುತ್ತೂರು, ಸುಶೀಲ ಬಿ ಶೆಟ್ಟಿ ಎರ್ಮೆನಿಲೆ, ರೋಹಿತ್ ರೈ ಚೆಂಬರಡ್ಕ, ಸಮಿತಿ ಅಧ್ಯಕ್ಷ ಚೇತನ್ ಕುಮಾರ್ ಪಿ ಕೆ, ವಕೀಲರು ನೋಟರಿ ರಾಮಣ್ಣ ಗೌಡ ದೇವರಮನೆ, ಗ್ರಾಮ ಪಂ. ಸದಸ್ಯೆ ಜಯಲಕ್ಷ್ಮೀ ಕೆ, ಗೌರವಾಧ್ಯಕ್ಷ ಈಶ್ವರ್ ಭಟ್ ಪೂರ್ಲಪ್ಪಾಡಿ ಭಾಗವಹಿಸಿದ್ದರು. ಅಲ್ಲದೇ ಹತ್ತನೇ ಮತ್ತು 12ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು ಮತ್ತು ಈ ಭಾಗದ ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ನ ನೂತನ ಅಧ್ಯಕ್ಷರನ್ನು ಈ ಸಂದರ್ಭದಲ್ಲಿ ಸಮಿತಿಯಿಂದ ಗೌರವಿಸಲಾಯಿತು.

ಗೌತಮಿ ಹಾಗೂ ನಿಶ್ಮಿತಾ ಪ್ರಾರ್ಥಿಸಿದರು. ಶೀತಲ್ ಪಿ ಜೆ ಸ್ವಾಗತಿಸಿದರು. ಗಿರೀಶ್ ಪಿ ಆರ್, ಕಿರಣ್ ಚಂದ್ರ ಆಳ್ವ ಬಹುಮಾನ ವಿತರಣೆಯಲ್ಲಿ ಸಹಕರಿಸಿ, ಯತೀಶ್ ಪಿ ವಂದಿಸಿದರು. ಹರೀಶ್ ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು. ಶ್ರೀವರ ಯುವಕ ಮಂಡಲದ ಪದಾಧಿಕಾರಿಗಳು ಹಾಗೂ ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘದ ಸದಸ್ಯೆಯರು ಕಾರ್ಯಕ್ರಮದಲ್ಲಿ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಊರವರಿಂದ ವಿವಿಧ ರೀತಿಯ ಸಾಂಸ್ಕ್ರತಿಕ ಕಾರ್ಯಕ್ರಮ ಹಾಗೂ ಕಿರು ನಾಟಕ ನಡೆಯಿತು.


























