ಸುಳ್ಯ : ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಜಾನುವಾರುಗಳನ್ನು ಕಳವುಗೈದಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಳ್ಯ ಸಂಪಾಜೆ ನಿವಾಸಿ ವರದರಾಜ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ವರದರಾಜ ರವರ ಮನೆಯಾದ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಗೂನಡ್ಕ ಎಂಬಲ್ಲಿ ಸೆ.12 ರಂದು ರಾತ್ರಿ ವೇಳೆ ಹಸುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿ ಕರುಗಳನ್ನು ಕಟ್ಟಿ ಹಾಕದೇ ಬಿಟ್ಟಿದ್ದು, ಸೆ.13 ರಂದು ಬೆಳಿಗ್ಗೆ ಹಸುಗಳಿಗೆ ಹುಲ್ಲು ಹಾಕಲು ಕೊಟ್ಟಿಗೆಗೆ ಹೋದಾಗ ಕಟ್ಟಿ ಹಾಕಿದ್ದ 2 ಹಸುಗಳು ಕಾಣಿಸದಿದ್ದು, ಹಸುಗಳನ್ನು ಸುತ್ತಮುತ್ತ ಪರಿಸರದಲ್ಲಿ ಹುಡುಕಾಡಿ ಇಲ್ಲಿಯವರೆಗೆ ಪತ್ತೆಯಾಗದಿರುತ್ತದೆ. ಕರುಗಳು ತೋಟದಲ್ಲಿದ್ದು, ಸದರಿ ಹಸುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವಾದ 2 ಹಸುಗಳ ಅಂದಾಜು ಮೌಲ್ಯ ರೂ 10000/- ಆಗಬಹುದು ಎಂಬುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಕಲಂ : 379 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























