ಕಿನ್ನಿಗೋಳಿ : ಕೆಲವು ದಿನಗಳ ಹಿಂದೆ ನಾಗರ ಹಾವಿಗೆ ಡೀಸೆಲ್ ಎರಚಿದ ವ್ಯಕ್ತಿ ಇದೀಗ ಮೈ ಉರಿ ಸಮಸ್ಯೆಯಿಂದ ಬಳಲುತ್ತಿದ್ದಾನೆ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವರದಿಯಾಗಿದೆ.
ನಾಗರ ಹಾವಿಗೆ ಡೀಸೆಲ್ ಎರಚಿದ ಕಾರಣ ಈ ಸಮಸ್ಯೆ ಪ್ರಾರಂಭವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಒಂದು ವಾರದ ಹಿಂದೆ ಕಿನ್ನಿಗೋಳಿಯ ಬಹುಮಹಡಿ ಕಟ್ಟಡದ ಸಮೀಪ ಕಂಡು ಬಂದಿದ್ದ ನಾಗರ ಹಾವಿಗೆ ಉತ್ತರ ಕರ್ನಾಟಕ ಮೂಲದ ಕಾರ್ಮಿಕನೋರ್ವ ಡೀಸೆಲ್ ಎರಚಿದ್ದು, ಕೂಡಲೇ ಹಾವು ಮೈ ಉರಿಯಿಂದ ಒದ್ದಾಡ ತೊಡಗಿತ್ತು, ಕೂಡಲೇ ಸ್ಥಳೀಯರು ಉರಗ ರಕ್ಷಕ ಯತೀಶ್ ಕಟೀಲು ಅವರಿಗೆ ವಿಷಯ ತಿಳಿಸಿದ್ದು, ಅವರು ಹಾವಿಗೆ ಚಿಕಿತ್ಸೆ ನೀಡಿ, ಸಹಜ ಸ್ಥಿತಿಗೆ ಮರಳುವಂತೆ ಮಾಡಿದ್ದರು.
ತುಳುನಾಡಿನಲ್ಲಿ ನಾಗ ದೇವರಿಗೆ ವಿಶೇಷ ಸ್ಥಾನಮಾನವಿದೆ. ನಾಗರ ಹಾವನ್ನು ತುಳುನಾಡಿನಲ್ಲಿ ಪೂಜ್ಯ ಬಾವದಿಂದ ಕಾಣಲಾಗುತ್ತಿದೆ. ಅದಕ್ಕೇನಾದರೂ ತೊಂದರೆ ಉಂಟು ಮಾಡಿದರೆ ಸಮಸ್ಯೆ ಕಟ್ಟಿಟ್ಟ ಬುಟ್ಟಿ ಎನ್ನುವುದು ಜನರ ನಂಬಿಕೆ..


























