ಪುತ್ತೂರು : ಅನಾರೋಗ್ಯದಿಂದಾಗಿ ವ್ಯಕ್ತಿಯೋರ್ವರು ನಿಧನರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಉರ್ಲಾಂಡಿ ನಿವಾಸಿ ಮಹೇಶ್ (37) ಮೃತ ವ್ಯಕ್ತಿ.

ಈ ಮೊದಲು ಪುತ್ತೂರಿನ ಪ್ರತಿಷ್ಠಿತ ಬಟ್ಟೆ ಮಳಿಗೆಯಲ್ಲಿ ಕೆಲಸಕ್ಕಿದ್ದ ಮಹೇಶ್., ಕೆಲ ದಿನಗಳಿಂದ ಅನಾರೋಗ್ಯದಿಂದಿದ್ದರು.
ಅವಿವಾಹಿತರಾಗಿರುವ ಮಹೇಶ್ ತಾಯಿ ಜೊತೆ ಉರ್ಲಾಂಡಿ ಮನೆಯಲ್ಲಿ ವಾಸವಾಗಿದ್ದರು.

ಇಂದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು ಎಂದು ವರದಿಯಾಗಿದೆ.


























