ಬೆಳ್ತಂಗಡಿ : ಮಹಿಳೆಯೋರ್ವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ನೀಡಿದ ದೂರಿನ ಮೇರೆಗೆ ಅಂಟೋನಿ ಪಿ.ಡಿ., ಪ್ರಸಾದ್ ಮತ್ತು ಲಾರೆನ್ಸ್ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಿಳೆಯು ಸೆ.18 ರಂದು ಬೆಳೆಗ್ಗೆ ತನ್ನ ತಾಯಿಯ ಮನೆಗೆ ಹೋಗಿದ್ದು, ಅಲ್ಲಿ ಕೆಲಸದವರಿಗೆ ಚಹಾ-ತಿಂಡಿ ಮಾಡಿ ತೋಟಕ್ಕೆ ತೆಗೆದುಕೊಂಡು ಹೋಗುತ್ತಿರುವಾಗ ಅಂಟೋನಿ ಪಿ ಡಿ ರವರು ಬೇಲಿ ಹಾಕುವ ವಿಚಾರದಲ್ಲಿ ತಕರಾರು ತೆಗೆದಿರುತ್ತಾರೆ. ಆ ಬಳಿಕ ಮಹಿಳೆಯು ತಾಯಿಯ ಮನೆಯ ಅಂಗಳದಲ್ಲಿರುವಾಗ ಅಂಟೋನಿ ಪಿ ಡಿ, ಪ್ರಸಾದ್ ಮತ್ತು ಲಾರೆನ್ಸ್ ಎಂಬವರು ಅಲ್ಲಿಗೆ ಬಂದು ಮಹಿಳೆಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ;447,354,506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























