ಬಂಟ್ವಾಳ : ಮನೆಯಲ್ಲಿ ಮಲಗಿರುವ ಯುವತಿಗೆ ಕೋಣೆಯ ಕಿಟಕಿ ತೆರೆದು ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಘಟನೆ ಬಾಳ್ತಿಲ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಎಂಬಲ್ಲಿ ಈ ಘಟನೆ ಸೆ.20 ರಂದು ರಾತ್ರಿ ಘಟನೆ ನಡೆದಿದೆ ಎನ್ನಲಾಗಿದೆ.
ದೂರುದಾರರು ನೀಡಿದ ಮನೆಯ ಕೋಣೆಯ ಕಿಟಕಿಯ ಪರದೆಯನ್ನು ಸರಿಸಿ ಬಳಿಕ ಕಿಟಕಿ ಮೂಲಕ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ವಿಶ್ವನಾಥ ಇಣುಕಿ ನೋಡುತ್ತಿದ್ದ.
ಈತ ಕಿಟಕಿಯ ಬಳಿ ನಿಂತು ಇಣುಕಿ ನೋಡುತ್ತಿದ್ದನ್ನು ಗಮನಿಸಿ ದೂರುದಾರರು ಜೋರಾಗಿ ಕಿರುಚಿದಾಗ ಅಲ್ಲಿಂದ ಓಡಿ ಹೋಗಿದ್ದಾನೆ. ಈತ ನೆರೆಮನೆಯವನಾಗಿದ್ದು, ಈತನ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 354(c) ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.



























