ಉಡುಪಿ : ಹಿಂದೂ ಜಾಗರಣ ವೇದಿಕೆ ಸಂಬಂಧಿಸಿದ ಫೇಸ್‌ಬುಕ್ ಪೇಜ್ ಅನ್ನು ಹ್ಯಾಕ್ ಮಾಡಲಾಗಿದೆ ಎಂದು ಹಿಂಜಾವೆ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಜಿಲ್ಲಾ ಹಿಂಜಾವೇ ನಾಯಕರ ಫೇಸ್‌ಬುಕ್ ಪೇಜ್‌ಗಳನ್ನು ಹ್ಯಾಕ್ ಮಾಡಿದ್ದಾರೆ.ಅಲ್ಲದೆ ರಾಜ್ಯದ 20ಕ್ಕೂ ಅಧಿಕ ಪ್ರಮುಖರ ಫೇಸ್‌ಬುಕ್ ಪ್ರೊಫೈಲ್ ಗಳನ್ನು ಏಕಕಾಲದಲ್ಲಿ ತೆಗೆದು ಹಾಕಲಾಗಿದೆ ಎಂದು ಆರೋಪಿಸಿದರು.
ಸರಕಾರದ ಸೂಚನೆಯಿಂದ ಹೀಗೆ ಮಾಡಿದ್ದಾರೋ..!?? ಹ್ಯಾಕರ್ಸ್‌ಗಳನ್ನು ಬಳಸಿ ಮಾಡಿದ್ದರೋ ಎಂಬುವುದರ ತನಿಖೆಯಾಗಬೇಕು ಎಂದರು.


























