ಪುತ್ತೂರು : ನಾನು ನಡೆಸಿಕೊಂಡು ಬರುತ್ತಿರುವ ರೈ ಚಾರಿಟೇಬಲ್ ಟ್ರಸ್ಟಿನಲ್ಲಿ ರಾಜಕೀಯ ಇಲ್ಲ ,ಇದರಲ್ಲಿ ರಾಜಕೀಯ ಎಂಟ್ರಿಯಾಗಲು ಅವಕಾಶವೇ ಇಲ್ಲ ಎಂದು ಟ್ರಸ್ಟ್ ಮುಖ್ಯಸ್ಥರಾದ ಅಶೋಕ್ ರೈ ಹೇಳಿದರು.

ಅವರು ಬೈಪಾಸ್ ಉದಯಗಿರಿ ಸಭಾಂಗಣದಲ್ಲಿ ನಡೆದ ಟ್ರಸ್ಟ್ ಸದಸ್ಯರ ಸಭೆಯಲ್ಲಿ ಮಾತನಾಡಿದರು.
ಸಮಾಜ ಸೇವೆ ಹಾಗೂ ಬಡವರ ಸೇವೆ ಮಾಡಬೇಕೆಂಬ ಏಕೈಕ ಉದ್ದೇಶದಿಂದ ಟ್ರಸ್ಟ್ ಆರಂಭ ಮಾಡಿದ್ದೇನೆ. ಸುಮಾರು 22 ಸಾವಿರ ಕುಟುಂಬಗಳಿಗೆ ನನ್ನಿಂದಾದ ನೆರವು ನೀಡಿದ್ದೇನೆ. ಯಾವತ್ತೂ ಟ್ರಸ್ಟನ್ನು ರಾಜಕೀಯಕ್ಕೆ ಬಳಸಿಕೊಂಡಿಲ್ಲ, ಬಳಸುವುದೂ ಇಲ್ಲಎಂದು ಹೇಳಿದರು.

10 ವರ್ಷದಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಬರುತ್ತಿರುವ ಟ್ರಸ್ಟ್ ವತಿಯಿಂದ ಮುಂದಿನ ದಿನಗಳಲ್ಲಿ ಆರೋಗ್ಯ ಮೇಳ, ಉದ್ಯೋಗ ಮೇಳ, ಶಿಕ್ಷಣ ಸೇರಿದಂತೆ ಹಲವು ವಿಚಾರಗಳಲ್ಲಿ ಸಮುದಾಯಕ್ಕೆ ಪ್ರಯೋಜನವಾಗುವ ಕೆಲಸವನ್ನು ಮಾಡಲಿದ್ದೇವೆ. ಸಾರ್ವಜನಿಕರ ಸೇವೆಗಾಗಿ ಶಾಸಕರ ಕಚೇರಿಯಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ನಾನು ಎಲ್ಲರಿಗೂ ಶಾಸಕನಾಗಿದ್ದು, ಎಲ್ಲರೂ ನನ್ನ ಕಚೇರಿಗೆ ಬಂದು ತಮ್ಮ ಕೆಲಸವನ್ನು ಮಾಡಿಸಿಕೊಳ್ಳಬಹುದು ಎಂದು ಹೇಳಿದರು.

ದುಶ್ಚಟಗಳ ವಿರುದ್ದ ಟ್ರಸ್ಟ್ ನಿಂದ ಚಳುವಳಿ ಆರಂಭ ಮಾಡುತ್ತೇವೆ. ದಾರಿ ತಪ್ಪುತ್ತಿರುವ ಯುವ ಸಮೂಹವನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸವನ್ನು ಮಾಡಲಿದ್ದೇವೆ. ಯುವಕ,ಯುವತಿಯರಿಗೆ ಉದ್ಯೋಗ ತರಬೇತಿ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ಅಧ್ಯಕ್ಷತೆಯನ್ನು ಶಾಸಕರಾದ ಅಶೋಕ್ ರೈ ವಹಿಸಿದ್ದರು.
ಅಕ್ರಮಸಕ್ರಮ ಸಮಿತಿ ಸದಸ್ಯರಾದ ಮಹಮದ್ ಬಡಗನ್ನೂರು, ನಿರಂಜನ್ ರೈ ಮಠಂತಬೆಟ್ಟು, ಸಾಮಾಜಿಕ ಜಾಲತಾಣದ ಕೃಷ್ಣಪ್ರಸಾದ್ ಬೊಳ್ಳಾವು ಉಪಸ್ಥಿತರಿದ್ದರು.
ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿ ರಾಜೇಂದ್ರ ರೈ, ಲಿಂಗಪ್ಪ ರೈ ಕಾರ್ಯಕ್ರಮ ನಿರ್ವಹಿಸಿದರು.

























