ಬಂಟ್ವಾಳ : ವಿದ್ಯಾರ್ಥಿಯೋರ್ವ ನಾಪತ್ತೆಯಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಮೂಲದ ಪ್ರಸ್ತುತ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಬಿ.ಸಿ.ಎ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿ ನಾಪತ್ತೆಯಾದಾತ.
ವಿದ್ಯಾರ್ಥಿಯ ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಬಿ.ಸಿ.ಎ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ಶಾಲೆಯ ಹಾಸ್ಟೇಲ್ ನಲ್ಲಿ ಇರುವುದಾಗಿದೆ. ಸೆ.13 ರಂದು ಊರಿಗೆ ಬಂದಿದ್ದಾತನು ಸೆ.23 ರಂದು ರಾತ್ರಿ ಹಿಂತಿರುಗಿ ಹಾಸ್ಟೇಲ್ ಗೆ ಹೋಗುವುದಾಗಿ ರೈಲಿನ ಮೂಲಕ ಬೆಂಗಳೂರಿನಿಂದ ತೆರಳಿರುತ್ತಾನೆ.
ಮರುದಿನ ಬೆಳಿಗ್ಗೆ ಮಗನ ಮೊಬೈಲ್ ಕರೆ ಸಂಪರ್ಕಿಸಲು ಸಾಧ್ಯವಾಗದಿದ್ದು, ಆತನ ಸ್ನೇಹಿತನಿಗೆ ಕರೆ ಮಾಡಿದಾಗ ಬಾಲಕನು ಹಾಸ್ಟೆಲಿಗೆ ತಲುಪಲಿಲ್ಲ ಎಂಬುದು ತಿಳಿದುಬಂದಿರುತ್ತದೆ. ಬಳಿಕ ಶಾಲಾ ಆಡಳಿತ ಮಂಡಳಿಗೆ ಮಾಹಿತಿ ನೀಡಿ, ಹುಡುಕಾಟ ನಡೆಸಲಾಗಿ ಬಾಲಕ ಪತ್ತೆಯಾಗಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಕಲಂ: 363 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


























