ವಿಟ್ಲ : ಮಾಹಿತಿ ಕೇಂದ್ರ ಗ್ರಾಮ ಒನ್, ನಾಗರೀಕ ಸೇವಾಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಸೆ.28 ರಂದು ವಿಟ್ಲ ಪಡ್ನೂರು ಗ್ರಾಮ ಕೊಡಂಗಾಯಿ ಪಂಚಾಯತ್ ಕಚೇರಿ ಬಳಿ ಉದ್ಘಾಟನೆಗೊಳ್ಳಲಿದೆ.
ವಿಟ್ಲ ಭಗವತಿ ದೇವಸ್ಥಾನದ ಮೋನಪ್ಪ ಗುರುಸ್ವಾಮಿ ರವರು ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ.
ಕೊಡಂಗಾಯಿ ಎಂಜೆಎಂ ಖತೀಬರಾದ ಸಿದ್ಧೀಖ್ ಅರ್ಷದಿ ರವರು ಪ್ರಾರ್ಥನೆ ನೆರವೇರಿಸಲಿದ್ದಾರೆ.
ಮಾಜಿ ಸಚಿವರಾದ ಬಿ. ರಮಾನಾಥ್ ರೈ ರವರು ಉದ್ಘಾಟನೆ ನೆರವೇರಿಸಲಿದ್ದಾರೆ.
ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.



























