ಪೆರ್ನೆ : ನಿಯಂತ್ರಣ ತಪ್ಪಿ ಥಾರ್ ಜೀಪ್ ಅಪಘಾತ ಸಂಭವಿಸಿದ ಘಟನೆ ಪೆರ್ನೆ ಸಮೀಪದ ಕಡಂಬು ಬಳಿ ನಡೆದಿದೆ.

ಘಟನೆಯಲ್ಲಿ 5 ಮಂದಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ಉಪ್ಪಿನಂಗಡಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ಫಾರೂಕ್ ರವರು ಸಹಕರಿಸಿದರು.

ನಾಲ್ವರಿಗೆ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಓರ್ವನಿಗೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ..



























