ವಿಟ್ಲ : ಆಟೋ ಚಾಲಕನಿಗೆ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟ್ಲ ನಿವಾಸಿ ಮಹಮ್ಮದ್ ಸುಹೈಲ್ ಎಂಬವರು ನೀಡಿದ ದೂರಿನ ಮೇರೆಗೆ ಹಾರೀಸ್, ಅಶ್ರಫ್ ಉರಿಮಜಲು, ರಿಯಾಜ್ ಉರಿಮಜಲು, ಅಚ್ಚುಕು ಕೋಲ್ಪೆ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಮ್ಮದ್ ಸುಹೈಲ್ ಎಂಬವರು ಸೆ.27 ರಂದು ರಾತ್ರಿ ಕಂಬಳಬೆಟ್ಟುವಿನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗುವಾಗ ಹಾರೀಸ್ ಗೂ ಸುಹೈಲ್ ಗೂ ಮಾತುಕತೆಯಾಗಿದ್ದು, ಸೆ.28 ರಂದು ಬೆಳಿಗ್ಗೆ ಸುಹೈಲ್ ತನ್ನ ಆಟೋರಿಕ್ಷಾದಲ್ಲಿ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಬಂಟ್ವಾಳ ತಾಲೂಕು ವಿಟ್ಲಮುಡ್ನೂರು ಗ್ರಾಮದ ಕಂಬಳಬೆಟ್ಟು ಎಂಬಲ್ಲಿ ತಲುಪಿದಾಗ ಹಾರೀಸ್ ಆಟೋರಿಕ್ಷಾದಲ್ಲಿ ಅಶ್ರಫ್ ಉರಿಮಜಲು, ರಿಯಾಝ್ ಉರಿಮಜಲು ,ಅಚ್ಚುಕು ಕೊಲ್ಪೆ ರವರೊಂದಿಗೆ ಬಂದು ಸುಹೈಲ್ ಆಟೋರಿಕ್ಷಾಕ್ಕೆ ಅಡ್ಡ ಇಟ್ಟು ತಡೆದು ನಿಲ್ಲಿಸಿ ಹಾರೀಸ್‌ನು ಆಟೋದಲ್ಲಿದ್ದ ಸುಹೈಲ್ ಗೆ ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿ, ಬೆದರಿಕೆ ಹಾಕಿ ಹೋಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.