ಪುತ್ತೂರು : ಮಾನಹಾನಿಕಾರವಾದ ಸುಳ್ಳು ಸುದ್ದಿ ಬಿತ್ತರಿಸಿರುವುದಾಗಿ ಆರೋಪಿಸಿ ಬನ್ನೂರು ನಿವಾಸಿ ಶೇಖರ್ ಎನ್.ಪಿ ಎಂಬವರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.
ಪತ್ರಿಕೆ ಮತ್ತು ಖಾಸಗಿ ಚಾನೆಲ್ ನಲ್ಲಿ ಇಲ್ಲ ಸಲ್ಲದ ಆರೋಪ ಮಾಡಿ, ತೇಜೋವಧೆ ಮಾಡಿ, ಮಾನಹಾನಿಕಾರವಾದ ಸುಳ್ಳು ಸುದ್ದಿಯನ್ನು ಬಿತ್ತರಿಸಿರುತ್ತಾರೆ.
ಉದ್ಯಮಿಯಾಗಿದ್ದು, ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಈ ಹಿಂದೆ ಅರುಣ್ ಕುಮಾರ್ ಪುತ್ತಿಲ ರವರ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಜನಪರ ಸೇವೆಗಳಲ್ಲಿ ಭಾಗಿಯಾಗಿರುತ್ತೇನೆ. ಈ ಸಂದರ್ಭ ರಾಜಕೀಯ ಕೆಸರೆರಚಾಟಗಳು ಸಾಮಾನ್ಯವಾಗಿದ್ದು, ಈ ಹಿನ್ನೆಲೆ ತೋಜೋವಧೆ ಮಾಡುವ ಉದ್ದೇಶದಿಂದ ಮಾನಹಾನಿಕಾರವಾದ ಸುಳ್ಳು ಸುದ್ದಿ ಬಿತ್ತರಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.