ವಿಟ್ಲ : ಮಂಗಳೂರು ಪದವಿ ಪೂರ್ವ ಶಿಕ್ಷಣ ಇಲಾಖೆ ದ.ಕ ಜಿಲ್ಲೆ ಹಾಗೂ ವಿಠ್ಠಲ ಪದವಿಪೂರ್ವ ಕಾಲೇಜು ವಿಟ್ಲ ಇದರ ಸಹಯೋಗದಲ್ಲಿ ದ.ಕ ಜಿಲ್ಲಾ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟವು ವಿಟ್ಲದ ವಿಠ್ಠಲ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು.

ಈ ಪಂದ್ಯಾಟವನ್ನು ರಾಜ್ಯಮಟ್ಟದ ಬಾಸ್ಕೆಟ್‌ಬಾಲ್, ಹ್ಯಾಂಡ್ ಬಾಲ್ ಆಟಗಾರ ಮಂಗಳೂರು ಎ ಜೆ ಆಸ್ಪತ್ರೆಯ ಡಾ. ಪೃಥ್ವೀಶ್ ಹೆಚ್ ಹೆಗ್ಡೆ ಉದ್ಘಾಟಿಸಿದರು.

ದ ಕ ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ, ವಿಠ್ಠಲ ಎಜುಕೇಶನ್ ಸೊಸೈಟಿ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್, ಕಾರ್ಯದರ್ಶಿ ರಾಧಾಕೃಷ್ಣ ನಾಯಕ್, ಕೋಶಾಧಿಕಾರಿ ಬಾಬು ಕೊಪ್ಪಳ, ಸದಸ್ಯರುಗಳಾದ ರವಿಪ್ರಕಾಶ್, ನಿತ್ಯಾನಂದ ನಾಯಕ್, ಪದ್ಮಯ್ಯ ಗೌಡ, ಸದಾಶಿವ ಬನ, ಶಿವರಾಮ ಭಟ್, ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ಆಡಳಿತಾಧಿಕಾರಿ ಪ್ರಶಾಂತ್ ಚೊಕ್ಕಾಡಿ, ಉಪ ಪ್ರಾಂಶುಪಾಲ ಕಿರಣ್ ಕುಮಾರ್ ಬ್ರಹ್ಮಾವರ್, ದೈಹಿಕ ಶಿಕ್ಷಣ ನಿರ್ದೇಶಕ ಶ್ರೀನಿವಾಸ ಗೌಡ, ಐಟಿಐ ಪ್ರಾಂಶುಪಾಲ ರಮೇಶ್ ರೈ, ಪಿ ಡಿ ರವಿಶಂಕರ್, ಪಿಟಿ ವಿಶ್ವನಾಥ ರಾಥೋಡ್, ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಅನ್ನಪೂರ್ಣ, ಉಪನ್ಯಾಸಕರುಗಳಾದ ಉದಯ ನಾಯ್ಕ, ಚಂದ್ರಕಾಂತ, ಅಣ್ಣಪ್ಪ ಸಾಸ್ತಾನ್, ಮಾಧವ ಮತ್ತಿತರರು ಭಾಗವಹಿಸಿದ್ದರು.



























