ವಿಟ್ಲ : ಬಸವನಗುಡಿಯಲ್ಲಿರುವ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲಾ ಶಿಕ್ಷಕರೆಲ್ಲರ ಉಪಸ್ಥಿತಿಯಲ್ಲಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯ ಮೂಲಕ ಗೌರವ ಸಲ್ಲಿಸಲಾಯಿತು.

ಶಾಲಾ ಪ್ರಾಂಶುಪಾಲ ಜಯರಾಮ ರೈಯವರು ಲಾಲ್ ಬಹದ್ದೂರ್ ಶಾಸ್ತ್ರಿಯವರು ಸ್ವಾತಂತ್ರ್ಯಕ್ಕಾಗಿ ಸಮಯೋಚಿತ ತ್ಯಾಗ ಹಾಗೂ ಗಾಂಧೀಜಿ ಯವರ ಅಹಿಂಸಾತ್ಮಕ ಚಳುವಳಿಗಳನ್ನು ನೆನಪಿಸಿದರು. ಶಾಲಾ ಸಹ ಶಿಕ್ಷಕಿ ಸುಜಾತ ರವರು ದಿನದ ಮಹತ್ವವನ್ನು ತಿಳಿಸುತ್ತಾ, ಭಾರತೀಯ ಸೇನೆಗೆ ನೀಡಿದ ಪೂರ್ಣ ಜವಬ್ದಾರಿ, ಹಸಿರು ಕ್ರಾಂತಿಯ ಬಗ್ಗೆ ತಿಳಿಸಿದರು.


ಮಹಾತ್ಮಗಾಂಧಿಯವರ ಅಹಿಂಸಾತ್ಮಕ ಸ್ವಾತಂತ್ರ್ಯ ಚಳವಳಿ, ಹಳ್ಳಿಗಳ ಅಭಿವೃದ್ಧಿ, ರಾಮರಾಜ್ಯದ ಕನಸುಗಳು ನಿಜವಾಗಿಯೂ ಮಾದರಿ, ಈ ನೆಲೆಯಲ್ಲಿ ಮಹಾತ್ಮಾಗಾಂಧಿಯೋರ್ವರು ಆದರ್ಶ ನಾಯಕ ಎಂಬುದನ್ನು ಸ್ಮರಿಸಿಕೊಳ್ಳಲಾಯಿತು ಬಳಿಕ ಶಿಕ್ಷಕರೆಲ್ಲರೂ ಸೇರಿ ಶಾಲಾ ಸ್ವಚ್ಛತೆಯನ್ನು ನಡೆಸಲಾಯಿತು. ಶಿಕ್ಷಕಿ ಸಂಧ್ಯಾ ಕಾರ್ಯಕ್ರಮ ನಿರೂಪಿಸಿ,ಸ್ವಾಗತಿಸಿದರು. ಶಿಕ್ಷಕಿ ಲಾವಣ್ಯ ರವರು ಪ್ರಾರ್ಥಿಸಿದರು. ಶಿಕ್ಷಕಿ ಜಯಂತಿ ವಂದಿಸಿ ಸಹಕರಿಸಿದರು.


























