ಪುತ್ತೂರು ಮೂಲದ ವ್ಯಕ್ತಿಯೋರ್ವರು ಹೃದಯಾಘಾತದಿಂದ ಕುವೈಟ್ ನಲ್ಲಿ ನಿಧನರಾದ ಬಗ್ಗೆ ವರದಿಯಾಗಿದೆ.
ಮುರ ನಿವಾಸಿ, ಸುಭಾಸ್ ಕ್ರಿಕೆಟರ್ಸ್ ಇದರ ಮಾಜಿ ಆಟಗಾರ ಶರೀಫ್ (42) ಮೃತರು.

ಶರೀಫ್ ಕ್ರಿಕೆಟ್ ಆಟಗಾರರಾಗಿದ್ದು, ತಮ್ಮ ಉತ್ತಮ ಆಟಗಾರಿಕೆ ಮೂಲಕ ಎಲ್ಲರಿಗೆ ಚಿರಪರಿಚಿತರಾಗಿದ್ದರು.
ಕೆಲ ಸಮಯಗಳಿಂದ ಉದ್ಯೋಗದ ನಿಮಿತ್ತ ಅವರು ಕುವೈಟ್ ನಲ್ಲಿ ವಾಸವಾಗಿದ್ದರು.
ಮೃತರು ಪತ್ನಿ ಹಾಗೂ ಮನೆಯವರನ್ನು ಅಗಲಿದ್ದಾರೆ..

























