ಪುತ್ತೂರು : ಅ.7 ರಂದು ಪುತ್ತೂರಿನಲ್ಲಿ ನಡೆಯಲಿರುವ ಶೌರ್ಯ ಜಾಗರಣ ರಥಯಾತ್ರೆ, ಶೋಭಾಯಾತ್ರೆ ಮತ್ತು ಬೃಹತ್ ಹಿಂದೂ ಶೌರ್ಯ ಸಂಗಮ ಸಮಾವೇಶದ ಕುರಿತು ಅ.5 ರಂದು ಪುತ್ತೂರು ಪೇಟೆಯಲ್ಲಿ ಆಮಂತ್ರಣ ಪತ್ರ ವಿತರಣೆ ಕಾರ್ಯಕ್ರಮ ನಡೆಯಿತು.

ದರ್ಬೆಯಿಂದ-ಬೊಳುವಾರು ತನಕ, ಪೇಟೆಯುದ್ದಕ್ಕೂ ಹಿಂದೂ ಪರ ಸಂಸ್ಥೆಗಳಿಗೆ ಆಮಂತ್ರಣ ಪತ್ರ ವಿತರಣೆ ಮಾಡಲಾಯಿತು.
ವಿಶ್ವ ಹಿಂದೂ ಪರಿಷದ್ ಜಿಲ್ಲಾಧಕ್ಷ ಡಾ. ಕೃಷ್ಣಪ್ರಸನ್ನ, ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ಶೌರ್ಯ ರಥಯಾತ್ರೆ ಸ್ವಾಗತ ಸಮಿತಿ ಅಧ್ಯಕ್ಷ ಕಿಶೋರ್ ಬೊಟ್ಯಾಡಿ, ಸಂಚಾಲಕ ಕೃಷ್ಣ ಪ್ರಸಾದ್ ಬೆಟ್ಟ, ಕಾರ್ಯದರ್ಶಿ ವಿರೂಪಾಕ್ಷ ಭಟ್, ದಿನೇಶ್ ಪಂಜಿಗ, ವಿಶಾಖ್ ರೈ, ಹರೀಶ್ ದೋಳ್ಪಾಡಿ ಸಹಿತ ಹಲವಾರು ಮಂದಿ ಪೇಟೆಯಲ್ಲಿ ಆಮಂತ್ರಣ ಪತ್ರ ವಿತರಣೆ ಮಾಡಿದರು.

ಬೊಳುವಾರು ವೃತ್ತದಲ್ಲಿ ಅಲಂಕಾರ :
ಬಜರಂಗದಳ ಶೌರ್ಯ ಜಾಗರಣ ರಥಯಾತ್ರೆ ಹಾಗೂ ಹಿಂದೂ ಶೌರ್ಯ ಸಂಗಮ ಹಿನ್ನೆಲೆ ಬೊಳುವಾರು ವೃತ್ತ ಕೇಸರಿಮಯವಾಗಿದ್ದು, ಬಂಟಿಂಗ್ಸ್ ಗಳಿಂದ ಆವೃತ್ತವಾಗಿದೆ.

ಪುತ್ತೂರು ಪೇಟೆಗೆ ಪ್ರವೇಶಿಸುವ ಮೊದಲು ಸಿಗುವ ಬೊಳುವಾರು ವೃತ್ತವು ಕೇಸರಿಮಯವಾಗಿ ಕಂಗೊಳಿಸುತ್ತಿದೆ.


























