ಉಪ್ಪಿನಂಗಡಿ : ಅಂಗಡಿ ನುಗ್ಗಿ ವ್ಯಕ್ತಿಯೋರ್ವರಿಗೆ ಹಲ್ಲೆ ನಡೆಸಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ನಿವಾಸಿ ಬಿ.ಕೆ. ಅಬ್ದುಲ್ ರಹೀಮಾನ್ ಎಂಬವರು ನೀಡಿರುವ ದೂರಿನ ಮೇರೆಗೆ ಜಕಾರಿಯ, ಹಮೀದ್, ರಫೀಕ್, ಅನ್ಸಾಫ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಬಿ.ಕೆ ಅಬ್ದುಲ್ ರಹೀಮಾನ್ ಎಂಬವರು ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕ ಎಂಬಲ್ಲಿ ಜನರಲ್ ಸ್ಟೋರ್ ಹೊಂದಿದ್ದು, ಅ.5 ರಂದು ಸಂಜೆ ವ್ಯಾಪಾರ ಮಾಡಿಕೊಂಡಿದ್ದಾಗ, ಪರಿಚಯ ಇರುವ ಜಕಾರಿಯ ಎಂಬುವರು ಏಕಾಏಕಿಯಾಗಿ ಅಂಗಡಿ ಒಳಗಡೆ ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿರುತ್ತಾನೆ.
ಈ ವೇಳೆ ಹಮೀದ್, ರಫಿಕ್, ಅನ್ಸಾಫ್ ಎಂಬವರುಗಳು ಮರದ ದೊಣ್ಣೆಗಳೊಂದಿಗೆ ಬಂದಾಗ ಸಾರ್ವಜನಿಕರು ತಡೆದಿದ್ದು, ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ. ಕೊಂದು ಮುಗಿಸುವುದಾಗಿ ಬೆದರಿಕೆ ಹಾಕಿ ತೆರಳಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 137/2023 ಕಲಂ: 448,324,323,506 ಜೊತೆಗೆ 34 ಭಾ.ದಂ.ಸಂ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























