ಶಿವಮೊಗ್ಗ : ಈದ್ ಮಿಲಾದ್ ಗಲಾಟೆಗೆ ಸಂಬಂಧಿಸಿದಂತೆ ರಾಗಿ ಗುಡ್ಡಕ್ಕೆ ಭೇಟಿ ನೀಡಿದ್ದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದ ರಾಗಿ ಗುಡ್ಡಕ್ಕೆ ಭೇಟಿ ನೀಡಿದ್ದ ಅರುಣ್ ಪುತ್ತಿಲ, ಕಲ್ಲು ತೂರಾಟಕ್ಕೆ ಒಳಗಾದ ಹಿಂದೂಗಳ ಮನೆಗಳಿಗೆ ತೆರಳಿ, ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿದ್ದರು. ನೊಂದ ಕುಟುಂಬಸ್ಥರಿಗೆ ದೈರ್ಯವನ್ನು ತುಂಬಿ, ಬಳಿಕ ಮಾತನಾಡಿದ್ದ ಅರುಣ್ ಪುತ್ತಿಲ.., ಆಯುಧ ಪೂಜೆಯ ದಿನ ಶಸ್ತ್ರಾಸ್ತ್ರಗಳಿಗೆ ಪೂಜೆ ಮಾಡಿ ಎಂದಿದ್ದರು.
ಏನ್ ಹೇಳಿದ್ದರು ಪುತ್ತಿಲ..?
ಅನೇಕ ರೀತಿಯ ನೋವು, ದಾಳಿ, ಅಪಮಾನದ ನಡುವೆ ಹಿಂದೂ ಸಮಾಜದ ರಕ್ಷಣೆ ಆಗಬೇಕಿದೆ. ಸರ್ಕಾರ ತಲ್ವಾರ್ ಹಿಡಿದು ಮೆರವಣಿಗೆಗೆ ಅವಕಾಶ ಮಾಡಿಕೊಡುತ್ತಾರೆ ಎಂದರೆ ಮಾರಕಾಸ್ತ್ರ ಹಿಡಿದು ಹಿಂದು ಸಮಾಜದ ಮೇಲೆ, ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲು ಸಹಕಾರ ಕೊಡುತ್ತಾರೆ. ನಮ್ಮಲ್ಲೂ ತಲ್ವಾರ್, ಶಸ್ತ್ರಾಸ್ತ್ರ ಇದೆ. ಅಗತ್ಯ ಬಿದ್ದರೆ ಇದೇ ಶಸ್ತ್ರಾಸ್ತ್ರ ಮೂಲಕ ಪ್ರತಿಕ್ರಿಯೆ ಕೊಡಲು ಹಿಂದೂ ಸಮಾಜ ಸಿದ್ಧವಿದೆ. ನವರಾತ್ರಿ ದಿನ ಶಸ್ತ್ರಾಸ್ತ್ರಗಳಿಗೆ ಪೂಜೆ ಮಾಡುತ್ತೇವೆ. ಪ್ರತಿ ಮನೆ ಮನೆಯಲ್ಲಿಯೂ ತಲ್ವಾರ್ಗಳಿಗೆ ಪೂಜೆ ಮಾಡಬೇಕು. ಸ್ಕ್ರ್ಯೂಡ್ರೈವರ್, ಸ್ಪಾನರ್ ಕೈಬಿಡಿ ತಲ್ವಾರ್ಗಳಿಗೆ ಪೂಜೆ ಮಾಡಿ ಎಂದಿದ್ದರು.
144 ಅಡಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಕೋಮುಗಳ ನಡುವೆ ದ್ವೇಷದ ಭಾವನೆ ಮೂಡುವಂತಹ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

























