ವಿಟ್ಲ : ಟಾಟಾ ಐರಿಷ್ ಮತ್ತು ಮಹೀಂದ್ರಾ ಜೀತೋ ಚಾಲಕ ಮಾಲಕರ ಸಂಘದ ಐದನೇ ವಾರ್ಷಿಕ ಸಭೆಯು ವಿಟ್ಲ ಪೊಲೀಸ್ ಠಾಣೆಯ ಆಶ್ರಿತ ಸಭಾ ಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಕುದ್ರಿಯಗುತ್ತು ಹಾಗೂ ಕಾರ್ಯದರ್ಶಿ ಬಾಲಕೃಷ್ಣ ಕಾನತ್ತಡ್ಕ ಇವರನ್ನು ಸನ್ಮಾನಿಸಲಾಯಿತು. ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಹೆಚ್ ಇ ನಾಗರಾಜ್, ಎಸ್ ಐ ಗಳಾದ ರತನ್ ಕುಮಾರ್ ಮತ್ತು ವಿದ್ಯಾ ಕೆ ಜೆ, ನೂತನ ಅಧ್ಯಕ್ಷ ಎಂ ವಿಶ್ವನಾಥ ಕುಲಾಲ್, ಕಾರ್ಯದರ್ಶಿ ರಮೇಶ್ ಕಾನತ್ತಡ್ಕ, ನಾರಾಯಣ ಪಡಿಬಾಗಿಲು, ಶ್ರೀಧರ ಪಡಿಬಾಗಿಲು, ಮುರುಗೇಶ್ ದರ್ಬೆ, ಹಬೀಬ್ ರಹಿಮಾನ್ ಕುಕ್ಕೆರೆಬೆಟ್ಟು, ಇಸ್ಮಾಯಿಲ್ ಕುಕ್ಕರೆಬೆಟ್ಟು, ರಮ್ಲಾ ಕೊಡಿಪ್ಪಾಡಿ, ಉದಯ ತೋರಣಕಟ್ಟೆ, ಇಸಾಕ್ ಬೈರಿಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.


























