ವೇಣೂರು : ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ಸಂಬಂಧಿಕರಿಬ್ಬರು ಠಾಣೆಗೆ ದೂರು ನೀಡಿದ ಘಟನೆ ವೇಣೂರಿನಲ್ಲಿ ನಡೆದಿದೆ.
ಎರಡು ತಂಡದವರು ಪರಸ್ಪರ ಆರೋಪಿಸಿ ದೂರು ನೀಡಿದ್ದು, ಈ ಬಗ್ಗೆ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ
ಮೂಡಬಿದ್ರೆ ಶಿರ್ತಾಡಿ ನಿವಾಸಿ ಲಕ್ಷ್ಮಣ ಪೂಜಾರಿ ಎಂಬವರು ನೀಡಿದ ದೂರಿನ ಮೇರೆಗೆ ಉಮೇಶ್ ಮತ್ತು ಜ್ಯೋತಿ ವಿರುದ್ಧ ಪ್ರಕರಣ ದಾಖಲಾಗಿದೆ.
ಯುವತಿಯೋರ್ವಳು ನೀಡಿದ ದೂರಿನ ಮೇರೆಗೆ ಲಕ್ಷ್ಮಣ ಪೂಜಾರಿ, ಐಶ್ವರ್ಯ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಲಕ್ಷ್ಮಣ ಪೂಜಾರಿ ನೀಡಿದ ದೂರಿನಲ್ಲೇನಿದೆ..!?
ಲಕ್ಷ್ಮಣ ಪೂಜಾರಿ ಅ.6 ರಂದು ಸಂಜೆ ತನ್ನ ಹೆಂಡತಿಯ ತವರು ಮನೆಯಾದ ಬೆಳ್ತಂಗಡಿ ತಾಲೂಕು ಮರೋಡಿ ಗ್ರಾಮದ ನೆಕ್ಕರೆ ಎಂಬಲ್ಲಿ ತನ್ನ ಮಾವನೊಂದಿಗೆ ಮನೆಯಂಗಳದಲ್ಲಿದ್ದಾಗ, ಉಮೇಶ್ ಎಂಬವರು ಮರದ ದೊಣ್ಣೆಯನ್ನು ಹಿಡಿದುಕೊಂಡು ಜ್ಯೋತಿ ಎಂಬವರೊಂದಿಗೆ ಬಂದು, ಅವ್ಯಾಚವಾಗಿ ಬೈದು ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಹಲ್ಲೆ ನಡೆಸಿರುತ್ತಾನೆ.
ಜ್ಯೋತಿ ಎಂಬವರು ಕೈಯಿಂದ ಹಲ್ಲೆ ನಡೆಸಿರುತ್ತಾರೆ. ಈ ವೇಳೆ ಲಕ್ಷ್ಮಣ ಪೂಜಾರಿ ರವರ ಹೆಂಡತಿ, ಮಕ್ಕಳು ಹಲ್ಲೆ ನಡೆಸದಂತೆ ತಡೆದಾಗ ಉಮೇಶ್ ರವರು ಜೀವ ಬೆದರಿಕೆ ಹಾಕಿ ತೆರಳಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದರೆ.
ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ 64/2023 ಕಲಂ: 504, 323,307 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಯುವತಿ ನೀಡಿದ ದುರಿನಲ್ಲೇನಿದೆ..!??
ಅ.6 ರಂದು ಸಂಜೆ ಬೆಳ್ತಂಗಡಿ ತಾಲೂಕು ಮರೋಡಿ ಗ್ರಾಮದ ನೆಕ್ಕರೆ ಎಂಬಲ್ಲಿ ಯುವತಿಯ ಅಜ್ಜನಿಗೆ ಶಾಂತಾ ಎಂಬವರು ಮತ್ತು ಅವರ ಮನೆಯವರು ಬೈಯುತ್ತಿರುವುದನ್ನು ಕಂಡು, ಯುವತಿಯ ತಂದೆ ವಿಚಾರಿಸಲು ಹೋಗಿರುತ್ತಾರೆ. ಆಗ ಲಕ್ಷ್ಮಣ ಪೂಜಾರಿ ಎಂಬವರು ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿರುತ್ತಾರೆ.
ಸದರಿ ಗಲಾಟೆಯನ್ನು ಯುವತಿ ಬಿಡಿಸಲು ಹೋದಾಗ, ಲಕ್ಷ್ಮಣ ಪೂಜಾರಿ ಮತ್ತು ಐಶ್ವರ್ಯ ರವರುಗಳು ಯುವತಿಗೆ ಕೈಯಿಂದ ಹಲ್ಲೆ ನಡೆಸಿ, ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿರುವುದಾರೆಂದು ದೂರಿನಲ್ಲಿ ತಿಳಿಸಿದ್ದರೆ.
ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಕಲಂ: 504, 323, 354, 506 ಜೊತೆಗೆ 34 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


























