ಸುಬ್ರಹ್ಮಣ್ಯ : ದಕ್ಷಿಣ ಕನ್ನಡ ಜಿಲ್ಲೆಯ ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಎಚ್ ಡಿ ದೇವೇಗೌಡ ದಂಪತಿ ಇಂದು ಭೇಟಿ ನೀಡಿದರು.
ನಾಗಪ್ರತಿಷ್ಠೆ, ತುಲಾಭಾರ, ಮಹಾಪೂಜೆಯನ್ನು ಅವರು ಕ್ಷೇತ್ರದಲ್ಲಿ ನೆರವೇರಿಸಲಿದ್ದು, ದೇವೇಗೌಡರ ಜೊತೆ ಪತ್ನಿ ಚೆನ್ನಮ್ಮ ಪೂಜಾ ಕಾರ್ಯಗಳಲ್ಲಿ ಭಾಗಿಯಾಗಲಿರುವರು.
ಬೆಳಿಗ್ಗೆ ಆಶ್ಲೇಷ ಪೂಜೆ ನೆರವೇರಿಸಿದ ಎಚ್.ಡಿ.ದೇವೇಗೌಡ ದಂಪತಿ, ಬಳಿಕ ಸಂಪುಟ ನರಸಿಂಹ ದೇವರ ದರ್ಶನ ಪಡೆದರು.

ಅಶ್ಲೇಷ ಪೂಜೆಯ ಬಳಿಕ 11 ಗಂಟೆಯವರೆಗೆ ಅವರು ವಿಶ್ರಾಂತಿ ಪಡೆಯಲಿದ್ದಾರೆ. ಬಳಿಕ ಮತ್ತೆ ದೇವಳದಲ್ಲಿ ತುಲಾಭಾರ ಸೇವೆ ನಡೆಸಲಿರುವರು. 12 ಗಂಟೆಗೆ ಮತ್ತೆ ಮಹಾಪೂಜೆಯಲ್ಲಿ ಭಾಗಿಯಾಗಲಿರುವರು.
ಬಳಿಕ ರಸ್ತೆ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.

























