ಬೆಂಗಳೂರು : ‘ಬಿಗ್ ಬಾಸ್ ಕನ್ನಡ ಸೀಸನ್ 10’ಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್ ಅವರು ಜೋಶ್ನಲ್ಲಿ ಶೋ ನಡೆಸಿಕೊಟ್ಟಿದ್ದಾರೆ.
ಮನೆ ಒಳಗೆ 17 ಸ್ಪರ್ಧಿಗಳು ಕಾಲಿಟ್ಟಿದ್ದಾರೆ. ಈ ರಿಯಾಲಿಟಿ ಶೋ ಜಿಯೋ ಸಿನಿಮಾ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಪ್ರಸಾರ ಆಗಲಿದೆ.
17 ಸ್ಪರ್ಧಿಗಳ ಫೋಟೋ ಹಾಗೂ ವಿವರ..:

ನಮ್ರತಾ ಗೌಡ ಅವರು ಕಿರುತೆರೆ ಮೂಲಕ ಫೇಮಸ್ ಆದವರು. ‘ಕೃಷ್ಣ ರುಕ್ಮಣಿ’ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ‘ಪುಟ್ಟಗೌರಿ ಮದುವೆ’, ‘ನಾಗಿಣಿ 2’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದರು. ಅವರು ಬಿಗ್ ಬಾಸ್ಗೆ ಕಾಲಿಟ್ಟ ಮೊದಲ ಸ್ಪರ್ಧಿ.

ಸ್ನೇಹಿತ್ ಗೌಡ ಅವರು ‘ನಮ್ಮನೆ ಯುವರಾಣಿ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದರು.

ಈಶಾನಿ ಅವರು ಹುಟ್ಟಿದ್ದು ಮೈಸೂರಿನಲ್ಲಿ. ಬೆಳೆದಿದ್ದು ದುಬೈ ಹಾಗೂ ಲಾಸ್ ಏಂಜಲೀಸ್ನಲ್ಲಿ. ವೃತ್ತಿಯಲ್ಲಿ ಅವರು ರ‍್ಯಾಪರ್.

ವಿನಯ್ ಗೌಡ ಅವರು ಬಿಗ್ ಬಾಸ್ಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ‘ಹರ ಹರ ಮಹಾದೇವ’ ಧಾರಾವಾಹಿಯಲ್ಲಿ ಶಿವನ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ.

ಕಾಮಿಡಿ ಕಿಲಾಡಿಗಳು ಮೂಲಕ ಫೇಮಸ್ ಆದವರು ತುಕಾಲಿ ಸಂತೋಷ್. ನಾಟಕ ಒಂದರಲ್ಲಿ ತುಕಾಲಿ ಹೆಸರಿನ ಪಾತ್ರ ಮಾಡಿದ್ದರು. ಆ ಬಳಿಕ ಅವರನ್ನು ಎಲ್ಲರೂ ತುಕಾಲಿ ಸಂತು ಎಂದು ಕರೆದರು.

ನೀತು ವನಜಾಕ್ಷಿ ಅವರು ತೃತೀಯಲಿಂಗಿ., ಕೆಲವು ಚಿತ್ರಗಳಲ್ಲಿ ನಟಿಸಿರುವ ಅವರು ಬ್ಯೂಟಿ ಪಾರ್ಲರ್ ಹಾಗೂ ಹೋಟೆಲ್ ನಡೆಸುತ್ತಿದ್ದಾರೆ.

ಸಿರಿ ಅವರು ‘ರಂಗೋಲಿ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದರು. ಅವರು ಕಿರುತೆರೆ ಮೂಲಕ ಗುರುತಿಸಿಕೊಂಡಿದ್ದಾರೆ.

ಸ್ನೇಕ್ ಶ್ಯಾಮ್ ಅವರು ಉರಗ ರಕ್ಷಕರು. ಮೂಲತಃ ಮೈಸೂರಿನವರು. ಸಾಕಷ್ಟು ಪ್ರಾಣಿಗಳ ರಕ್ಷಣೆಯನ್ನು ಅವರು ಮಾಡಿದ್ದಾರೆ.

‘ಲಕ್ಷಣ’ ಧಾರಾವಾಹಿ ಇತ್ತೀಚೆಗಷ್ಟೇ ಪೂರ್ಣಗೊಂಡಿದೆ. ಈ ಧಾರಾವಾಹಿಯಲ್ಲಿ ನಟಿಸಿದ್ದ ಭಾಗ್ಯಶ್ರೀ ಕೂಡ ಬಿಗ್ ಬಾಸ್ಗೆ ಎಂಟ್ರಿ ಕೊಟ್ಟಿದ್ದಾರೆ. ಕಿರುತೆರೆಯಲ್ಲಿ ಅವರಿಗೆ ಹಲವು ವರ್ಷಗಳ ಅನುಭವ ಇದೆ.

ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಗೌರೀಶ್ ಅಕ್ಕಿ ಅವರಿಗೆ ಇದೆ. ಅವರು ಸಿನಿಮಾಗಳಲ್ಲೂ ನಟಿಸಿದ್ದಾರೆ.

ಮೈಕಲ್ ತಾಯಿ ಭಾರತದವರು, ತಂದೆ ನೈಜೀರಿಯಾದವರು. ಮೈಕಲ್ ತಮ್ಮದೇ ಬರ್ಗರ್ ಶಾಪ್ ಹೊಂದಿದ್ದಾರೆ. ಮಾಡೆಲ್ ಕೂಡ ಹೌದು.

ಡ್ರೋನ್ ಪ್ರತಾಪ್ ಎಂದೇ ಫೇಮಸ್ ಆದ ಇವರು ಬಿಗ್ ಬಾಸ್ಗೆ ಬಂದಿದ್ದಾರೆ.

ಸಂಗೀತಾ ಶೃಂಗೇರಿ ಅವರು ‘777 ಚಾರ್ಲಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರಿಗೆ ಕಿರುತೆರೆಯಲ್ಲೂ ನಟಿಸಿದ ಅನುಭವ ಇದೆ.

ಬುಲೆಟ್ ಪ್ರಕಾಶ್ ಮಗ ರಕ್ಷಕ್ ಅವರು ಬಿಗ್ ಬಾಸ್ಗೆ ಆಗಮಿಸಿದ್ದಾರೆ. ಗುರು ಶಿಷ್ಯರು ಸಿನಿಮಾದಲ್ಲಿ ಅವರು ನಟಿಸಿದ್ದರು.

ವರ್ತೂರ್ ಸಂತೋಷ್ ಅವರು ವೃತ್ತಿಯಲ್ಲಿ ರೈತ. ತಂದೆ ಬಿಟ್ಟು ಹೋದ ಜಮೀನಿನಲ್ಲಿ ಹಲವು ರೀತಿಯ ಬೆಳೆ ಬೆಳೆದಿದ್ದಾರೆ.

ತನಿಷಾ ಕುಪ್ಪಂಡ ಅವರು ಮಂಗಳ ಗೌರಿ ಧಾರಾವಾಹಿಯಲ್ಲಿ ಖಡಕ್ ವಿಲನ್ ಆಗಿ ಗಮನ ಸೆಳೆದವರು.

ಕಾರ್ತಿಕ್ ಅವರು ಕಿರುತೆರೆ ಮೂಲಕ ಗಮನ ಸೆಳೆದಿದ್ದಾರೆ. ಅವರು ಕೂಡ ಬಿಗ್ ಬಾಸ್ಗೆ ಬಂದಿದ್ದಾರೆ.


























