ಪುತ್ತೂರು : ವಿದ್ಯಾಭಾರತಿ ದಕ್ಷಿಣ ಮಧ್ಯ ಕ್ಷೇತ್ರೀಯ ಮಟ್ಟದ ಜ್ಞಾನ ವಿಜ್ಞಾನ ಮೇಳವು ವಿಜ್ಞಾನ ವಿಹಾರ ಆಂಗ್ಲ ಮಾಧ್ಯಮ ಪ್ರೌಢಶಾಲೆ -ನೂತಕ್ಕಿ, ಗುಂಟೂರು, ವಿಜಯವಾಡದಲ್ಲಿ ಅ.1 ಮತ್ತು ಅ.2ರಂದು ನಡೆಯಿತು.
ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರಿನ ವಿದ್ಯಾರ್ಥಿಗಳು ಭಾಗವಹಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

8ನೇ ತರಗತಿಯ ಶಮನ್ ಎನ್ (ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಸಂಧ್ಯಾ.ಕೆ ಮತ್ತು ನಿತ್ಯಾನಂದ ದಂಪತಿಗಳ ಪುತ್ರ) ತ್ಯಾಜ್ಯ ನಿರ್ವಹಣಾ ವಿಜ್ಞಾನ ಮಾದರಿಯಲ್ಲಿ ಪ್ರಥಮ ಸ್ಥಾನ ಹಾಗೂ 8ನೇ ತರಗತಿಯ ಪ್ರೀತಿ ಪ್ರಭು (ಪುಂಡಲಿಕ ಪ್ರಭು ಮತ್ತು ನಾಗಮಣಿ ಪ್ರಭು ದಂಪತಿಗಳ ಪುತ್ರಿ) ಗಣಿತ ಪ್ರಯೋಗದಲ್ಲಿ ಪ್ರಥಮ ಸ್ಥಾನ ಪಡೆದು ಕ್ರಮವಾಗಿ ಪಂಜಾಬಿನ ಅಮೃತಸರ ಮತ್ತು ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯ ಗುರುಗಳು ತಿಳಿಸಿದ್ದಾರೆ.

























