ವಿಟ್ಲ : ನಂದಿಕೂರಿನಿಂದ ಕಾಸರಗೋಡಿಗೆ ಹೋಗುವ 400ಕೆ.ವಿ ಹೈ ಟೆನ್ಶನ್ ಮಾರ್ಗವನ್ನು ಪುಣಚ ಗ್ರಾಮದ ಬೈರಿಕಟ್ಟೆಯಿಂದ ಕಾಮಗಾರಿ ಆರಂಭ ಮಾಡಲು ಯತ್ನಿಸಿದಾಗ ಪರಿಸರದ ರೈತ ವರ್ಗದವರು ಪ್ರತಿಭಟಿಸಿದ ಘಟನೆ ನಡೆದಿದೆ.


ಈ ಬಗ್ಗೆ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಹಿಂದೂ ಮುಖಂಡ ಭೇಟಿ ನೀಡಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.

ಈ ಬಗ್ಗೆ ಅಧಿಕಾರಿಗಳ ಜೊತೆ ಹಾಗೂ ರೈತ ವರ್ಗದವರ ಜೊತೆ ಚರ್ಚಿಸಿದರು.

ಯಾವುದೇ ಕಾರಣಕ್ಕೂ ಅನುಷ್ಠಾನ ಮಾಡೋದಕ್ಕೆ ಬಿಡೋದಿಲ್ಲ., ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗುವಂತೆ ಯಾವುದೇ ಆಸ್ಪಾದನೆ ಕೊಡಬೇಡಿ ಎಂದು ಅಧಿಕಾರಿಗಳ ಜೊತೆ ಮಾತನಾಡಿದರು.
ರೈತ ವರ್ಗದವರ ಜೊತೆ ಯಾವಾಗಲೂ ನಿಲ್ಲುವುದಾಗಿ., ರೈತರ ಪರ ಪುತ್ತಿಲ ಬ್ಯಾಟ್ ಬೀಸಿದ್ದು, ನಿಮ್ಮೊಂದಿಗೆ ನಾನಿದ್ದೇನೆ ಎಂಬ ಭರವಸೆಯನ್ನು ರೈತರಿಗೆ ನೀಡಿದರು.


400 ಕೆ.ವಿ. ವಿದ್ಯುತ್ ವಿರೋಧಿ ಹೋರಾಟ ಸಮಿತಿ ವಿಟ್ಲದ ಅಧ್ಯಕ್ಷರಾದ ರಾಜೀವ ಗೌಡ, ಸಂಜೀವ ಗೌಡ ಒಕ್ಕೆತ್ತೂರು, ಚಿತ್ರಾಂಜನ್ ಮಂಗಿಲಪದವು, ರೋಹಿತಾಶ್ವ ಮಂಗಿಲಪದವು, ದಾಮೋದರ ಗೌಡ ಒಕ್ಕೆತ್ತೂರು, ಅಬ್ಬಾಸ್ ಪುಣಚ, ಪುಣಚ ಪಂಚಾಯತ್ ಸದಸ್ಯ ಅಶೋಕ್, ಭಾಸ್ಕರ್ ಉಪಾಧ್ಯಾಯ ಪುಣಚ, ಪಾರ್ಥ ಸಾರಥಿ ವಾರಣಾಸಿ ಹಾಗೂ ಪುತ್ತಿಲ ಪರಿವಾರದ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಮಾರ್ತ, ಸುಧೀರ್ ಕುಮಾರ್ ಶೆಟ್ಟಿ ಮೊಡಂಬೈಲ್, ಭೀಮ ಭಟ್, ರಘುರಾಮ್ ಶೆಟ್ಟಿ ವಿಟ್ಲ, ಶರತ್ ಎನ್.ಎಸ್, ನವೀನ್ ಕುಮಾರ್ ಕಾಶೀಮಠ ಮತ್ತು ಹಲವರು ಉಪಸ್ಥಿತರಿದ್ದರು.




























