ಪುತ್ತೂರು : ಇನ್ನೋವಾ- ಆಟೋ ರಿಕ್ಷಾದವರ ನಡುವೆ ವಾಗ್ವಾದ ನಡೆದ ಘಟನೆ ಅರುಣಾ ಥಿಯೇಟರ್ ಸಮೀಪ ನಡೆದಿದೆ.

ಅರುಣಾ ಥಿಯೇಟರ್ ಸಮೀಪ ಇನ್ನೋವಾ- ಆಟೋ ರಿಕ್ಷಾ ವಾಹನಗಳ ನಡುವೆ ಡಿಕ್ಕಿಯಾಗುವ ಸಂಭವವಿದ್ದು, ಈ ಹಿನ್ನೆಲೆ ಸವಾರರ ನಡುವೆ ವಾಗ್ವಾದ ನಡೆದು, ಹೊಯ್-ಕೈಯ್ ನಡೆಯುವಷ್ಟರ ಮಟ್ಟಿಗೆ ತಲುಪಿತ್ತು.
ಪೊಲೀಸರ ಮಧ್ಯಪ್ರವೇಶದಿಂದ ತಪ್ಪಿದ ಘರ್ಷಣೆ..!!
ಕೂಡಲೇ ಸ್ಥಳಕ್ಕೆ ಬಂದ ಪುತ್ತೂರು ನಗರ ಹಾಗೂ ಸಂಚಾರಿ ಠಾಣಾ ಪೊಲೀಸರು ಮಧ್ಯ ಪ್ರವೇಶಿಸಿ ಎರಡು ಕಡೆಯವರನ್ನು ಸಮಾಧಾನಿಸಿದರು. ನಡೆಯಬಹುದಾಗಿದ್ದ ಘರ್ಷಣೆಯೊಂದು ಪೊಲೀಸರ ಮಧ್ಯಪ್ರವೇಶದಿಂದ ತಪ್ಪಿದಂತಾಗಿದೆ.

ಘಟನೆಯಿಂದಾಗಿ ಕೆಲ ಹೊತ್ತು ರಸ್ತೆ ಫುಲ್ ಬ್ಲಾಕ್ ಆಗಿದ್ದು, ವಾಹನ ಸಂಚಾರದಲ್ಲಿ ಅಸ್ತವ್ಯಸ್ಥವಾಗಿತ್ತು.



























