Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮಾಯಿದೆ ದೇವುಸ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಲೀನಾ ಸಲ್ದಾನ್ಹಾ ನಿಧನ..!!

    ಮಾಯಿದೆ ದೇವುಸ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಲೀನಾ ಸಲ್ದಾನ್ಹಾ ನಿಧನ..!!

    ಶ್ರಮ ಜೀವಿಗಳಿಗೆ ಸೀರೆ ನೀಡಿ ಗೌರವಿಸಿದ ಸುಳ್ಯದ ಹೆಸರಾಂತ ಚಿನ್ನದ ಮಳಿಗೆ..!!

    ಶ್ರಮ ಜೀವಿಗಳಿಗೆ ಸೀರೆ ನೀಡಿ ಗೌರವಿಸಿದ ಸುಳ್ಯದ ಹೆಸರಾಂತ ಚಿನ್ನದ ಮಳಿಗೆ..!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು: ಅಪ್ರಾಪ್ತನಿಗೆ ಹಲ್ಲೆ ಪ್ರಕರಣ ದಾಖಲು..!!

    ಪಟ್ಲ ಖ್ಯಾತ ನಾಟಿ ವೈದ್ಯ ಅಣ್ಣು ಪೂಜಾರಿ ವಿಧಿವಶ..!!

    ಪಟ್ಲ ಖ್ಯಾತ ನಾಟಿ ವೈದ್ಯ ಅಣ್ಣು ಪೂಜಾರಿ ವಿಧಿವಶ..!!

    ರಮಾನಾಥ್ ರೈ ಮುಂದಿನ ಬಾರಿಯೂ ಚುನಾವಣೆಗೆ ಸ್ಪರ್ಧಿಸ್ತಾರೆ: ಅವರನ್ನು ಗೆಲ್ಲಿಸೋ ಕೆಲ್ಸ ಮಾಡ್ಬೇಕು – ಸಿಎಂ ಸಿದ್ದರಾಮಯ್ಯ..!!!

    ರಮಾನಾಥ್ ರೈ ಮುಂದಿನ ಬಾರಿಯೂ ಚುನಾವಣೆಗೆ ಸ್ಪರ್ಧಿಸ್ತಾರೆ: ಅವರನ್ನು ಗೆಲ್ಲಿಸೋ ಕೆಲ್ಸ ಮಾಡ್ಬೇಕು – ಸಿಎಂ ಸಿದ್ದರಾಮಯ್ಯ..!!!

    ಕಡಬ: ನರ್ಸಿಂಗ್ ವಿದ್ಯಾರ್ಥಿನಿ ಉಡುಪಿಯಲ್ಲಿ ಆತ್ಮಹತ್ಯೆ..!!

    ಕಡಬ: ನರ್ಸಿಂಗ್ ವಿದ್ಯಾರ್ಥಿನಿ ಉಡುಪಿಯಲ್ಲಿ ಆತ್ಮಹತ್ಯೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಾರ್ಷಿಕೋತ್ಸವ – ‘ಮಾನಸೋಲ್ಲಾಸ 2023’ : ‘ಹಣ ಗಳಿಸುವುದಕ್ಕಿಂತ ಔದ್ಯೋಗಿಕ ಸಾರ್ಥಕತೆ ನಿಜವಾದ ಯಶಸ್ಸು’ – ಸತ್ಯಶಂಕರ್ ಕೆ.

October 11, 2023
in ಪುತ್ತೂರು
0
ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಾರ್ಷಿಕೋತ್ಸವ – ‘ಮಾನಸೋಲ್ಲಾಸ 2023’ : ‘ಹಣ ಗಳಿಸುವುದಕ್ಕಿಂತ ಔದ್ಯೋಗಿಕ ಸಾರ್ಥಕತೆ ನಿಜವಾದ ಯಶಸ್ಸು’ – ಸತ್ಯಶಂಕರ್ ಕೆ.
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಪುತ್ತೂರು : ಪ್ರತಿಯೊಬ್ಬನೂ ತನ್ನ ಜೀವನಕ್ಕೊಂದು ಸ್ಪಷ್ಟವಾದ ಗುರಿಯನ್ನು ಹೊಂದಬೇಕು. ಕನಸೊಂದು ನನಸಾಗುವಲ್ಲಿ ದೀರ್ಘ ಸಮಯ ಹಾಗೂ ನಿರಂತರ ಶ್ರಮ ಅಗತ್ಯ. ಜೀವನದಲ್ಲಿ ಯಶಸ್ಸು ಗಳಿಸುವುದೆಂದರೆ ನಾವು ತೊಡಗಿರುವ ವೃತಿಯಲ್ಲಿ ಉನ್ನತ ಸ್ಥಾನವನ್ನು ತಲುಪುದು. ಹಣವನ್ನು ಗಳಿಸುವುದು ಮಾತ್ರ ಜೀವನದ ಉದ್ದೇಶವಾಗದೆ, ಉದ್ಯೋಗದಲ್ಲಿ ಸಾರ್ಥಕತೆಯನ್ನು ಮೆರೆಯುವುದು ಯಶಸ್ಸೆಂದು ಗಣಿಸಲ್ಪಡುತ್ತದೆ ಎಂದು ಪುತ್ತೂರಿನ ಬಿಂದು ಸಂಸ್ಥೆಯ ಸ್ಥಾಪಕ, ಎಸ್.ಜಿ ಕಾರ್ಪೋರೇಟ್‌ನ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಸತ್ಯ ಶಂಕರ ಕೆ ಹೇಳಿದರು.

Advertisement
Advertisement
Advertisement

Advertisement
Advertisement

ಅವರು ಬಪ್ಪಳಿಗೆ ಶ್ರೀ ಶಂಕರ ಸಭಾಭವನದಲ್ಲಿ ಬುಧವಾರ ನಡೆದ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆ ಹಾಗೂ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳೆರಡರ ವಾರ್ಷಿಕೋತ್ಸವ ಕಾರ್ಯಕ್ರಮ ಮಾನಸೋಲ್ಲಾಸ 2023-24ರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಯಾವುದೇ ಕ್ಷೇತ್ರದಲ್ಲಿ ಸೋಲು ಎದುರಾದಾಗ ಅದನ್ನು ಹಿಮ್ಮೆಟ್ಟಿಸುವ ಛಲ ನಮ್ಮೊಳಗಿರಬೇಕಾಗುತ್ತದೆ. ಹೀಗಾಗಿ ಪ್ರತಿಯೊಂದು ಸನ್ನಿವೇಶವನ್ನೂ ಧನಾತ್ಮಕವಾಗಿ ಸ್ವೀಕರಿಸಬೇಕು. ಪ್ರತಿಸ್ಪರ್ಧಿಯೊಂದಿಗೆ ಸ್ಪರ್ಧೆಗೆ ಇಳಿಯದೆ, ಆತನ ಕಾರ್ಯವನ್ನು ಗಮನಿಸುತ್ತಿರಬೇಕು. ಮಾತ್ರವಲ್ಲದೆ ವ್ಯಕ್ತಿಗೆ ತನ್ನ ಬಗ್ಗೆ ಅಪರಿಮಿತ ಆತ್ಮವಿಶ್ವಾಸವಿರಬೇಕು. ಮಾಡುವ ಕೆಲಸದಲ್ಲಿ ಒಂದಲ್ಲ ಒಂದು ದಿನ ಗೆದ್ದೇ ಗೆಲ್ಲುತ್ತೇನೆ ಎಂಬ ನಂಬಿಕೆಯಿರಬೇಕು. ಹಾಗೆ ಗುರಿಯೆಡೆಗೆ ನಡೆಯುವಾಗ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ. ಎಂದಿಗೂ ಉತ್ಸಾಹವನ್ನು ಕಳೆದುಕೊಳ್ಳದೆ ಲವಲವಿಕೆಯಿಂದ ಜೀವಿಸಬೇಕು ಎಂದು ಹೇಳಿದರು.

ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಮಾತನಾಡಿ, ಯಾವುದೇ ಹುದ್ದೆಗೆ ಆಯ್ಕೆಯಾದರೂ ಮನುಷ್ಯ ಮಾನವೀಯತೆಯನ್ನು ಮರೆಯಬಾರದು. ಸಂಸ್ಕಾರವನ್ನು ಬೆಳೆಸಿಕೊಂಡು ಏರುವ ಉನ್ನತ ಹಂತ ಮೌಲ್ಯ ಪಡೆದುಕೊಳ್ಳುತ್ತದೆ. ಭಾರತೀಯ ಸಂಸ್ಕೃತಿಯನ್ನು ಉಳಿಸುವ ಕಾರ್ಯವನ್ನು ವಿದ್ಯಾರ್ಥಿ ಜೀವನದಿಂದಲೇ ಮಾಡಲು ತೊಡಗಬೇಕು ಎಂದು ಹೇಳಿದರು.

ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಹಿರಿಯ ವಿದ್ಯಾರ್ಥಿ ಡಾ.ನಿತಿನ್ ಬಂಗಾರಡ್ಕ ಮಾತನಾಡಿ, ವಿದ್ಯೆ ಹಾಗೂ ಸಂಸ್ಕಾರಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ಇಂದು ವಿದ್ಯೆ ಕಲಿಸುವ ಶಿಕ್ಷಣ ಸಂಸ್ಥೆಗಳು ಹಲವಾರಿವೆ. ಆದರೆ ವಿದ್ಯೆಯೊಂದಿಗೆ ಸಂಸ್ಕಾರವನ್ನು ಕಲಿಸುವ ಕಾಲೇಜುಗಳು ಬೆರಳೆಣಿಕೆಯಷ್ಟು ಮಾತ್ರವೆ ಇವೆ. ಪಠ್ಯ ಶಿಕ್ಷಣದ ಜೊತೆಗೆ ದೇಶಪ್ರೇಮವನ್ನೂ ತಿಳಿಸುವ ಸಂಸ್ಥೆಗಳು ಮತ್ತಷ್ಟು ಬೇಕಿವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ವಿದೇಶೀ ಸಂಸ್ಕೃತಿಯ ವ್ಯಾಮೋಹದಲ್ಲಿ ದೇಸೀ ಸಂಸ್ಕೃತಿಯನ್ನು ಜನರು ತಿರಸ್ಕರಿಸುತ್ತಿದ್ದಾರೆ. ಇಂತಹ ಮನಃಸ್ಥಿತಿ ಬದಲಾಗಬೇಕು. ದೇಶ ವಿದೇಶಗಳಲ್ಲಿಯೂ ಭಾರತದ ಸಂಸ್ಕೃತಿ, ವಿಪುಲವಾದ ಕಲೆಯನ್ನು ಅನಾವರಣಗೊಳಿಸಬೇಕು. ವಿದ್ಯಾರ್ಥಿಗಳು ಕಲೆಯನ್ನು ಪಸರಿಸುವ ಸಾಂಸ್ಕೃತಿಕ ರಾಯಭಾರಿಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ವತಿಯಿಂದ ಸತ್ಯಶಂಕರ್ ಕೆ ಹಾಗೂ ಡಾ.ನಿತಿನ್ ಬಂಗಾರಡ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿದ್ಯಾರ್ಥಿ ಕಾರ್ತಿಕ್ ಅಂಬಿಕಾ ಸಂಸ್ಥೆಯ ಕುರಿತಾದ ಹಾಡನ್ನು ರಚಿಸಿ, ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಾದ ಧನ್ವಿತ್, ಅನಿಕೇತ್, ಭುವನ್, ವಂಶಿಕ್ ರೈ ಅವರನ್ನು ಗೌರವಿಸಲಾಯಿತು. ಸಾಂಸ್ಕೃತಿಕವಾಗಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡ ನೆಲ್ಲಿಕಟ್ಟೆಯ ಭಾಸ್ಕರ ಬ್ಯಾಚ್ ಹಾಗೂ ಬಪ್ಪಳಿಗೆಯ ಮೈತ್ರೇಯಿ ಬ್ಯಾಚ್‌ಗೆ ಪ್ರಶಸ್ತಿಯನ್ನು ನೀಡಲಾಯಿತು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯರುಗಳಾದ ಸುರೇಶ್ ಶೆಟ್ಟಿ, ಡಾ.ಎಚ್.ಮಾಧವ ಭಟ್, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿ ಸಂಘದ ನಾಯಕ ನಿಶಾಂತ್, ಕಾರ್ಯದರ್ಶಿ ಶಮನ್ ಹಾಗೂ ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರಿಕಿಶನ್ ಹಾಗೂ ಕಾರ್ಯದರ್ಶಿ ಸಂದೀಪ್ ಪಾಟೀಲ್ ಉಪಸ್ಥಿತರಿದ್ದರು.

ಕಾಲೇಜಿನ ವಿದ್ಯಾರ್ಥಿನಿಯರಾದ ಆತ್ಮಶ್ರೀ ಮತ್ತು ತಂಡ ಪ್ರಾರ್ಥಿಸಿ, ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು ಸ್ವಾಗತಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಎಂ. ವಂದಿಸಿದರು. ನೆಲ್ಲಿಕಟ್ಟೆಯ ಉಪ ಪ್ರಾಂಶುಪಾಲೆ ಶೈನಿ ಕೆ.ಜೆ. ಹಾಗೂ ಬಪ್ಪಳಿಗೆಯ ಉಪನ್ಯಾಸಕಿ ಕೃತಿ ಸಾಧಕರ ಪಟ್ಟಿ ವಾಚಿಸಿದರು.

ಉಪನ್ಯಾಸಕರಾದ ಆಶಿಕ್ ಬಾಲಚಂದ್ರ ಹಾಗೂ ಸುಬ್ರಹ್ಮಣ್ಯ ಕೆ. ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸುಚಿತ್ರಾ ಪ್ರಭು ಅವರಿಂದ ವಾರ್ಷಿಕ ವರದಿ ಮಂಡನೆ ನಡೆಯಿತು. ತದನಂತರ ವಿದ್ಯಾರ್ಥಿಗಳಿಂದ ಭಾರತೀಯ ಕಲಾಪ್ರಕಾರಗಳನ್ನಾಧರಿಸಿದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Advertisement
Previous Post

‘ನಾವು ಹಿಂದೂಗಳು ಶಾಂತಿ ಪ್ರಿಯರು..,ನಾವು ಕಲ್ಲೆಸೆಯಲ್ಲ, ಕೊಳ್ಳಿ ಇಡಲ್ಲ, ತಲೆ ಒಡೆಯಲ್ಲ’ – ಉಡುಪಿಯ ಹಿಂದೂ ಸಮಾಜೋತ್ಸವದಲ್ಲಿ ಪೇಜಾವರ ಶ್ರೀ

Next Post

ವಿಟ್ಲ : ಕೆಲಿಂಜ ಸಮೀಪ ಖಾಸಗಿ ಬಸ್ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ನಡುವೆ ಡಿಕ್ಕಿ..!!!

OtherNews

ಮಾಯಿದೆ ದೇವುಸ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಲೀನಾ ಸಲ್ದಾನ್ಹಾ ನಿಧನ..!!
Featured

ಮಾಯಿದೆ ದೇವುಸ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಲೀನಾ ಸಲ್ದಾನ್ಹಾ ನಿಧನ..!!

March 9, 2026
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!
ಕ್ರೈಮ್

ಪುತ್ತೂರು: ಅಪ್ರಾಪ್ತನಿಗೆ ಹಲ್ಲೆ ಪ್ರಕರಣ ದಾಖಲು..!!

March 8, 2026
ಪಟ್ಲ ಖ್ಯಾತ ನಾಟಿ ವೈದ್ಯ ಅಣ್ಣು ಪೂಜಾರಿ ವಿಧಿವಶ..!!
ಪುತ್ತೂರು

ಪಟ್ಲ ಖ್ಯಾತ ನಾಟಿ ವೈದ್ಯ ಅಣ್ಣು ಪೂಜಾರಿ ವಿಧಿವಶ..!!

March 8, 2026
ವಿಟ್ಲ: ಸೈಕಲ್‌ನಿಂದ ಬಿದ್ದು ಬಾಲಕ ಮೃತ್ಯು..!!
Featured

ವಿಟ್ಲ: ಸೈಕಲ್‌ನಿಂದ ಬಿದ್ದು ಬಾಲಕ ಮೃತ್ಯು..!!

March 7, 2026
ವಿಟ್ಲ : ಅಕ್ರಮ ಸುಡುಮದ್ದು ತಯಾರಿಕಾ ಸ್ಥಳದಲ್ಲಿ ಸ್ಫೋಟ – ಆರೋಪಿತ ವಶಕ್ಕೆ..!!
ಕ್ರೈಮ್

ವಿಟ್ಲ : ಅಕ್ರಮ ಸುಡುಮದ್ದು ತಯಾರಿಕಾ ಸ್ಥಳದಲ್ಲಿ ಸ್ಫೋಟ – ಆರೋಪಿತ ವಶಕ್ಕೆ..!!

March 7, 2026
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!
Featured

ಪುತ್ತೂರು: ಕಾರು ತಾಗಿದ್ದಕ್ಕೆ ಹಲ್ಲೆ: ಆಸ್ಪತ್ರೆಗೆ ದಾಖಲು..!!

March 6, 2026

Leave a Reply Cancel reply

Your email address will not be published. Required fields are marked *

Recent News

ಮಾಯಿದೆ ದೇವುಸ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಲೀನಾ ಸಲ್ದಾನ್ಹಾ ನಿಧನ..!!

ಮಾಯಿದೆ ದೇವುಸ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಲೀನಾ ಸಲ್ದಾನ್ಹಾ ನಿಧನ..!!

March 9, 2026
ಶ್ರಮ ಜೀವಿಗಳಿಗೆ ಸೀರೆ ನೀಡಿ ಗೌರವಿಸಿದ ಸುಳ್ಯದ ಹೆಸರಾಂತ ಚಿನ್ನದ ಮಳಿಗೆ..!!

ಶ್ರಮ ಜೀವಿಗಳಿಗೆ ಸೀರೆ ನೀಡಿ ಗೌರವಿಸಿದ ಸುಳ್ಯದ ಹೆಸರಾಂತ ಚಿನ್ನದ ಮಳಿಗೆ..!!

March 9, 2026
ಹಾಸ್ಟೆಲ್​​ನ ವಾರ್ಡನ್​​ ಸೇರಿ ಹಲವರ ಮೇಲೆ ದಾಳಿ ನಡೆಸಿ ವಿದ್ಯಾರ್ಥಿ ಎಸ್ಕೇಪ್​​: ಗಾಯಗೊಂಡಿದ್ದ ಓರ್ವ ಬಾಲಕ ಸಾವು…!!

ಹಾಸ್ಟೆಲ್​​ನ ವಾರ್ಡನ್​​ ಸೇರಿ ಹಲವರ ಮೇಲೆ ದಾಳಿ ನಡೆಸಿ ವಿದ್ಯಾರ್ಥಿ ಎಸ್ಕೇಪ್​​: ಗಾಯಗೊಂಡಿದ್ದ ಓರ್ವ ಬಾಲಕ ಸಾವು…!!

March 8, 2026
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

ಪುತ್ತೂರು: ಅಪ್ರಾಪ್ತನಿಗೆ ಹಲ್ಲೆ ಪ್ರಕರಣ ದಾಖಲು..!!

March 8, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page