ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಅಂದ್ರೆ ಯುವಕರಿಗಂತೂ ಅಚ್ಚುಮೆಚ್ಚು. ಅವರ ಡಿಂಪಲ್ ನೋಡಿದ್ರೆ ಸಾಕು ಯುವಕರಂತೂ ನಾಚಿ ನೀರಾಗುತ್ತಾರೆ. ಅದರಂತೆಯೇ ರಚಿತಾ ರಾಮ್ ಕಟ್ಟಾ ಅಭಿಮಾನಿಯೊಬ್ಬ ಅವರ ಮೇಲಿನ ಅಭಿಮಾನಕ್ಕೆ ಏನು ಮಾಡಿದ್ದಾನೆ ಗೊತ್ತಾ?
ರಚಿತಾ ರಾಮ್ ಫೋಟೊವನ್ನು ಅಭಿಮಾನಿಯೊಬ್ಬರು ಬೆನ್ನಿನ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ನಗುತ್ತಿರುವ ನಟಿ “ನಮ್ಮನೆ ದೇವರು ರಚಿತಾ ರಾಮ್” ಎಂದು ಬರೆಸಿಕೊಂಡಿದ್ದಾರೆ. ಆ ವಿಡಿಯೋ ರಚ್ಚು ಅಭಿಮಾನಿಗಳ ಮನಗೆದ್ದಿದೆ. ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗುತ್ತಿದೆ.
ಕನ್ನಡದಲ್ಲಿ ದರ್ಶನ್, ಸುದೀಪ್, ಯಶ್, ಶಿವಣ್ಣ, ಪುನೀತ್ ಅಭಿಮಾನಿಗಳು ಈ ರೀತಿ ಟ್ಯಾಟೂ ಹಾಕಿಸಿಕೊಂಡಿರುವ ಫೋಟೊ, ವಿಡಿಯೋಗಳು ಈ ಹಿಂದೆ ವೈರಲ್ ಆಗಿತ್ತು. ಆದರೆ ನಟಿಯೊಬ್ಬರ ಫೋಟೊ ಟ್ಯಾಟೂವನ್ನು ಅಭಿಮಾನಿ ಹಾಕಿಸಿಕೊಂಡಿರುವುದು ಇದೇ ಮೊದಲು ಎನ್ನುವ ಮಾತುಗಳು ಕೇಳಿ ಬರುತ್ತಿದೆ.


























