ಬಂಟ್ವಾಳ : ಹಿಂದು ಜಾಗರಣ ವೇದಿಕೆ,ಬಂಟ್ವಾಳ ತಾಲೂಕಿನ ಆಶ್ರಯದಲ್ಲಿ ನೂತನ ಆ್ಯಂಬುಲೆನ್ಸ್ ಇಂದು ಲೋಕಾರ್ಪಣೆ ಗೊಂಡಿತು.
ವಿಶೇಷವಾಗಿ ಈ ಆ್ಯಂಬುಲೆನ್ಸ್ ಸಂಘದ ಹಿರಿಯರಾದ ದಿ.ವೆಂಕಟ್ರಮಣ ಹೊಳ್ಳ ಮತ್ತು ಸಂಘದ ಸ್ವಯಂ ಸೇವಕ ದಿ.ಶರತ್ ಮಡಿವಾಳ ಇವರ ಸ್ಮರಣಾರ್ಥ ವಾಗಿ ಲೋಕಾರ್ಪಣೆ ಗೊಳಿಸಲಾಗಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ ವಿಭಾಗ ಸಹ ಕಾರ್ಯವಾಹಕ್ ಜಗದೀಶ್ ಕಲ್ಲಡ್ಕ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಇವರು ದ್ವೀಪ ಪ್ರಜ್ವಲಿಸುವ ಮುಖಾಂತರ ಈ ಉದ್ಘಾಟನೆ ಮಾಡಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಜಿಲ್ಲಾ ಕಾರ್ಯವಾಹ ವಿನೋದ್ ಕೊಡಮನ್, ಶಾರದಾ ಗಣಪತಿ ವಿದ್ಯಾ ಕೇಂದ್ರ ಕೈರಂಗಳದ ಸಂಚಾಲಕರು ರಾಜರಾಮ್ ಭಟ್, ಹಿಂ. ಜಾ. ವೇ. ಪ್ರಾಂತ ಕಾರ್ಯಕಾರಿಣಿ ಸದಸ್ಯರು ರವಿರಾಜ್ ಬಿಸಿರೋಡ್, ಹಿಂ. ಜಾ. ವೇ ವಿಭಾಗ ಸಂಪರ್ಕ ಪ್ರಮುಕ್ ರತ್ನಾಕರ ಶೆಟ್ಟಿ ಕಲ್ಲಡ್ಕ, ಹಿಂ. ಜಾ. ವೇ ಜಿಲ್ಲಾ ಅಧ್ಯಕ್ಷರು ಜಗದೀಶ್ ನೇತ್ರಕೆರೆ, ಭಾರತಿಯ ಜನತಾ ಪಾರ್ಟಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಭಾರತಿಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ಅಧ್ಯಕ್ಷರಾದ ದೇವಪ್ಪ ಪೂಜಾರಿ, ಹಿಂ. ಜಾ. ವೇ. ಜಿಲ್ಲಾ ಹಿಂದೂ ಯುವ ವಾಹಿನಿ ಸಂಯೋಜಕ್ ಪ್ರಶಾಂತ್ ಕೆಂಪುಗುಡ್ಡೆ, ಹಿಂ. ಜಾ. ವೇ. ಜಿಲ್ಲಾ ಕಾರ್ಯದರ್ಶಿಗಳಾದ ಚಂದ್ರ ಕಲಾಯಿ, ಬಾಲಕೃಷ್ಣ ಕಲಾಯಿ, ಹಿಂ. ಜಾ. ವೇ. ಬಂಟ್ವಾಳ ಅಧ್ಯಕ್ಷರಾದ ತಿರುಲೇಶ್ ಬೆಳ್ಳೋರು, ಹಿಂ.ಜಾ. ವೇ. ಬಂಟ್ವಾಳ ಪ್ರದಾನ ಕಾರ್ಯದರ್ಶಿ ಯೋಗೀಶ್ ತುಂಬೆ, ಮಾತೃ ಸುರಕ್ಷಾ ಪ್ರಮುಕ್ ಶಿವಪ್ರಸಾದ್ ಧನುಪೂಜೆ, ವಿಶ್ವ ಹಿಂದೂ ಪರಿಷತ್ ಬಂಟ್ವಾಳ ಪ್ರಖಂಡದ ಪ್ರದಾನ ಕಾರ್ಯದರ್ಶಿ ಸುರೇಶ ಬೆಂಜಾನಪದವು, ಹರೀಶ್ ಬಾಂಬಿಲ, ರವಿ ಕೆಂಪುಗುಡ್ಡೆ, ಜಗದೀಶ್ ಕಾಮಜೆ, ಸಚಿನ್ ಬಿಸಿರೋಡ್, ಪರಿವಾರ ಸಂಘಟನೆಯ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಹಿಂ. ಜಾ. ವೇ. ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮವನ್ನು ನಿರೂಪಿಸಿದರು.