ವಿಶ್ವದ ಜನಪ್ರಿಯ ಕಾಫಿಹೌಸ್ ಕಂಪನಿ ಸ್ಟಾರ್ಬಗ್ಸ್ ಬಗ್ಗೆ ಬಹುತೇಕರಿಗೆ ತಿಳಿದಿದೆ. ಹೆಚ್ಚಿನವರಿಗೆ ಈ ಕಾಫಿಯ ಟೇಸ್ಟ್ ತಿಳಿದಿದೆ. ಆದರೆ ಅಚ್ಚರಿಯ ಸಂಗತಿ ಎಂದರೆ ಸ್ಟಾರ್ಬಗ್ಸ್ ಕಾಫಿಯ ರೆಸಿಪಿಯೊಂದು ಆನ್ಲೈನ್ನಲ್ಲಿ ಸೋರಿಕೆಯಾಗಿದೆ. ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳೇ ಇದನ್ನು ಸೋರಿಕೆ ಮಾಡಿದ್ದಾರೆ.
ಕೆಲಸದಿಂದ ವಜಾಗೊಂಡಿರುವ ಉದ್ಯೋಗಿಗಳಿಬ್ಬರು ಸೇಡು ತೀರಿಸಿಕೊಳ್ಳುವ ಸಲುವಾಗಿ ಸ್ಟಾರ್ಬಗ್ಸ್ ಕಂಪನಿ ತಯಾರಿಸುವ ಕಾಫಿ ರೆಸಿಪಿಯನ್ನು ಆನ್ಲೈನ್ನಲ್ಲಿ ಸೋರಿಕೆ ಮಾಡಿದ್ದಾರೆ. ರೆಸಿಪಿ ಹಂಚಿಕೊಂಡ ಬಳಿಕ ಈ ವಿಚಾರ ವೈರಲ್ ಆಗಿದೆ. ಅನೇಕರು ಇದನ್ನು ವೀಕ್ಷಿಸಿರುವುದು ಬೆಳಕಿಗೆ ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ಬಗ್ಸ್ನ ವಿಶೇಷ ಐಸ್ಡ್ ಶೇಕನ್, ಮೋಚಾ ಫ್ರಾಪ್ಪಸಿಯಂತಹ ಪಾನೀಯಗಳನ್ನು ತಯಾರಿಸುವ ವಿಶೇಷ ಹಂತಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಈ ಪಾನೀಯಗಳ ರುಚಿ ನೋಡಿದವರು ಇದನ್ನು ಕಂಡು ಅಚ್ಚರಿಗೊಂಡಿದಲ್ಲದೆ, ಬಗೆ ಬಗೆಯ ಕಾಮೆಂಟ್ ಕೂಡ ಬರೆದಿದ್ದಾರೆ.
A Starbucks employee got fired and she posted every Starbucks drink recipe. you’re welcome 😂😂😂 pic.twitter.com/dA8v2jsOET
— Ꮶᴀʟʏᴀɴ ×͜× (@IamKalyanRaksha) October 14, 2023

























