ಬೆಂಗಳೂರು : ಸೊಸೆಯೊಬ್ಬಳು ಪ್ರಿಯಕರನ ಜೊತೆ ಸೇರಿ ಅತ್ತೆಯನ್ನ ಕೊಂದ ಘಟನೆ ಬ್ಯಾಡರಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಘಟನೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ರಶ್ಮಿ, ಪುರುಷೋತ್ತಮ್, ಅಕ್ಷಯ್ ಬಂಧಿತ ಆರೋಪಿಗಳು.
ರಶ್ಮಿ ತನ್ನ ಸ್ನೇಹಿತನ ಜೊತೆ ಸೇರಿ ಅತ್ತೆ ಲಕ್ಷ್ಮಮ್ಮನನ್ನ ಕೊಂದಿದ್ದಾಳೆ. ಮಂಜುನಾಥ್ ಎಂಬುವರನ್ನ ಮದುವೆಯಾಗಿದ್ದ ರಶ್ಮಿ, ತಮ್ಮ ಮನೆಯ ಮೇಲೆ ಬಾಡಿಗೆಗೆ ಇದ್ದ ಅಕ್ಷಯ್ ಜೊತೆ ಸಂಪರ್ಕ ಹೊಂದಿದ್ದಳು. ಮನೆಯ ಹಣದ ವ್ಯವಹಾರಕ್ಕೆ ಲಕ್ಷ್ಮಮ್ಮ ಹಾಗೂ ರಶ್ಮಿ ಮಧ್ಯೆ ಆಗಾಗ ಜಗಳ ಕೂಡ ನಡೆಯುತ್ತಿತ್ತು. ಹೀಗಾಗಿ ತಾನೇ ಮನೆ ವ್ಯವಹಾರ ನೋಡಿಕೊಳ್ಬೇಕು ಅಂತ ರಶ್ಮಿ ಕಾದು ಕುಳಿತಿದ್ದಳು. ಅದಕ್ಕೆ ಪ್ರಿಯಕರನ ಜೊತೆ ಸೇರಿ ಅತ್ತೆಯನ್ನೇ ಕೊಲೆ ಮಾಡಲು ರಶ್ಮಿ ಪ್ಲಾನ್ ಮಾಡಿಕೊಂಡಿದ್ದಳು.

ಪ್ರಿಯಕರ ಅಕ್ಷಯ್ ಮತ್ತು ರಶ್ಮಿ
ಕಳೆದ 10ನೇ ತಾರೀಖು ಪ್ರಿಯಕರ ಅಕ್ಷಯ್ ಹಾಗೂ ಆತನ ಸ್ನೇಹಿತ ಪುರುಷೋತ್ತಮ್ ಜೊತೆ ಸೇರಿ ಅತ್ತೆ ಲಕ್ಷ್ಮಮ್ಮನನ್ನ ಕೊಲೆ ಮಾಡಿದ್ದಾಳೆ. ಮೊದಲು ಮಾತ್ರೆ ಕೊಟ್ಟಿದ್ದ ರಶ್ಮಿ, ನಂತರ ಪ್ರಿಯಕರ ಅಕ್ಷಯ್ ಮತ್ತು ಪುರುಷೋತ್ತಮ್ ಜೊತೆ ಸೇರಿ ಉಸಿರುಗಟ್ಟಿಸಿ ಕೊಂದಿದ್ದಾರೆ. ಬಳಿಕ ಹಾರ್ಟ್ ಅಟ್ಯಾಕ್ ಅಂತಾ ಸೀನ್ ಕ್ರಿಯೇಟ್ ಮಾಡಿದ್ದಾರೆ.

ಅಕ್ಷಯ್ ಮತ್ತು ಸ್ನೇಹಿತ ಪುರುಷೋತ್ತಮ್
ಚಾಟಿಂಗ್ ನಿಂದ ಬಯಲಾಯ್ತು ಕೊಲೆ ರಹಸ್ಯ..!
ಅದೇ ಬಿಲ್ಡಿಂಗ್ನ 1ನೇ ಮಹಡಿಯಲ್ಲಿ ವಾಸವಿದ್ದ ರಾಘವೇಂದ್ರ ಎಂಬಾತನಿಂದ ಈ ವಿಚಾರ ಬೆಳಕಿಗೆ ಬಂದಿದೆ. ರಾಘವೇಂದ್ರನು ಅಕ್ಷಯ್ ಮೊಬೈಲ್ ಪರಿಶೀಲನೆ ನಡೆಸಿದ್ದನು. ಈ ವೇಳೆ ಅಕ್ಷಯ್ ಮತ್ತು ರಶ್ಮಿ ಚಾಟಿಂಗ್ ವಿಚಾರ ಗೊತ್ತಾಗಿತ್ತು. ಅದನ್ನ ರಶ್ಮಿ ಪತಿ ಮಂಜುನಾಥ್ ಗೆ ಹೇಳಿದ್ದನು. ಅಲ್ಲದೇ ಚಾಟಿಂಗ್ ಮಾಡಿರೋ ಸಾಕ್ಷ್ಯ ಕೂಡ ಕಲೆ ಹಾಕಿದ್ದನು.
ನಂತರ ರಶ್ಮಿ ಪತಿ ಮಂಜುನಾಥ್ ಸಾಕ್ಷಿ ಸಮೇತ ಬ್ಯಾಡರಹಳ್ಳಿ ಠಾಣೆಗೆ ತೆರಳಿ ದೂರು ನೀಡಿದ್ದನು. ಸದ್ಯ ಮೂವರು ಆರೋಪಿಗಳನ್ನ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
























