ನವದೆಹಲಿ : ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡುವ ವಿವಾದಕ್ಕೆ ಸುಪ್ರೀಂಕೋರ್ಟ್ ಕೊನೆಗೂ ತನ್ನ ತೀರ್ಪು ಪ್ರಕಟ ಮಾಡಿದೆ.
ಸಲಿಂಗಿಗಳಿಗೆ ವಿವಾಹ ಅನ್ನೋದು ಮೂಲಭೂತ ಹಕ್ಕು ಅಲ್ಲ. ಸಲಿಂಗಿಗಳು ಜೊತೆಯಲ್ಲಿ ವಾಸ ಮಾಡಬಹುದು. ಸಲಿಂಗಿಗಳ ವಿವಾಹದ ಹಕ್ಕಿಗೆ ಸುಪ್ರೀಂಕೋರ್ಟ್‌ನಲ್ಲಿ ಮನ್ನಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ಕೊಡಬೇಕಾ? ಬೇಡ್ವಾ ಅನ್ನೋ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ಸದಸ್ಯರ ನ್ಯಾಯಪೀಠ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಮಹತ್ವದ ತೀರ್ಪು ಪ್ರಕಟಿಸಿದ ನ್ಯಾಯಾಲಯ ಸಲಿಂಗಿಗಳು ಮಕ್ಕಳನ್ನು ದತ್ತು ತೆಗೆದುಕೊಳ್ಳಬಹುದು. ಸಲಿಂಗಿಗಳ ವಿವಾಹ ಮಾನ್ಯತೆ ಕೋರಿದ ಅರ್ಜಿಗಳ ಬಗ್ಗೆ ಅನುಕಂಪ ಇದೆ. ಆದರೆ ಸಲಿಂಗ ವಿವಾಹಕ್ಕೆ ಕಾನೂನಿನ ಮನ್ನಣೆ ನೀಡಲಾಗಲ್ಲ ಎಂದು ಮಹತ್ವದ ತೀರ್ಪು ಪ್ರಕಟಿಸಿದೆ.
ನ್ಯಾಯಪೀಠದ ವ್ಯಾಖ್ಯಾನ ಏನು..!??
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠ, ಸಲಿಂಗ ವಿವಾಹ ಎಲೈಟ್ ಅಥವಾ ನಗರ ಪ್ರದೇಶದ್ದು ಅಲ್ಲ. ದೇಶದಲ್ಲಿ ಸತಿ ಪದ್ದತಿಯಿಂದ ಅಂರ್ತಜಾತಿ ವಿವಾಹದವರೆಗೆ ಕಾಲಕ್ಕೆ ತಕ್ಕಂತೆ ವಿವಾಹವೂ ಬದಲಾಗಿದೆ. ಮನುಷ್ಯರು ಸಂಗಾತಿಯನ್ನು ಬಯಸುವುದು ಸಹಜ. ವಿಶೇಷ ವಿವಾಹ ಕಾಯಿದೆಯನ್ನು ಸುಪ್ರೀಂಕೋರ್ಟ್ ರದ್ದು ಮಾಡಲಾಗಲ್ಲ. ವಿಶೇಷ ವಿವಾಹ ಕಾಯಿದೆಯನ್ನು ಹೊಸದಾಗಿ ರೂಪಿಸಲಾಗಲ್ಲ. ನಾಗರಿಕರಿಗೆ ಸಂಗಾತಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇದೆ. ಶಾಸಕಾಂಗದ ವ್ಯಾಪ್ತಿಯೊಳಗೆ ಮಧ್ಯಪ್ರವೇಶ ಮಾಡಲ್ಲ. ಸುಪ್ರೀಂಕೋರ್ಟ್ ಕಾನೂನು ಮಾಡಲಾಗಲ್ಲ ಎಂದು ಅಭಿಪ್ರಾಯ ಪಟ್ಟಿದೆ.


























