ಪುತ್ತೂರು : ಮುಖ್ಯ ರಸ್ತೆಯಲ್ಲಿರುವ ಫೋಟೋ ಡೆವಲಪ್ ಸ್ಟುಡಿಯೋ ಆಡ್ ಲ್ಯಾಬ್ ಸಿಡಿಲಿಗೆ ಸಂಪೂರ್ಣ ಸುಟ್ಟು ಕರಕಲಾಗಿದೆ.
ಮಂಗಳವಾರ ಮಧ್ಯಾಹ್ನ ವೇಳೆ ಜೋರಾಗಿ ಗಾಳಿ ಮಳೆ ಹಾಗೂ ಸಿಡಿಲು ಬಂದಿದ್ದು, ಈ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಕಂಪ್ಯೂಟರ್ ಸೇರಿದಂತೆ ಎಲ್ಲಾ ಉಪಕರಣಗಳು ಸುಟ್ಟು ಹೋಗಿವೆ ಎಂದು ವರದಿಯಾಗಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಅಂಗಡಿಯವರು ಬೆಂಕಿ ನಂದಿಸುವ ಕಾರ್ಯ ಮಾಡಿದ್ದು, ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಸಹಕರಿಸಿ ಬಳಿಕ ವಸ್ತುಗಳನ್ನು ಹೊರಗಿಡಲು ಸಹಕರಿಸಿದರು.
























