ಭೋಪಾಲ್ : ಸಾಮಾನ್ಯವಾಗಿ ಫುಡ್ ಡೆಲಿವರಿ ಸಂಸ್ಥೆಗಳಾದ ಸ್ವಿಗ್ಗಿ ಹಾಗೂ ಜೊಮ್ಯಾಟೊ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ. ತಡವಾಗಿ ಫುಡ್ ಡೆಲಿವರಿ ಮಾಡಿದಕ್ಕೆ, ಸಿಗ್ನಲ್ ಜಂಪ್ ಮಾಡಿದ್ದಕ್ಕೆ ಹೀಗೆ ಸಾಕಷ್ಟು ಕಾರಣಕ್ಕೆ ಸ್ವಿಗ್ಗಿ ಹಾಗೂ ಜೊಮ್ಯಾಟೊ ಸುದ್ದಿ ಆಗಿದ್ದೇ ಹೆಚ್ಚು. ಇದೀಗ ಅಂಥದ್ದೇ ಒಂದು ಕಾರಣಕ್ಕಾಗಿ ಜೊಮ್ಯಾಟೊ ಮತ್ತೆ ಸುದ್ದಿಯಲ್ಲಿದೆ.
ಹೌದು,., ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ಜೊಮ್ಯಾಟೊ ಡೆಲಿವರಿ ಗರ್ಲ್ ರೀತಿಯಲ್ಲಿ ಜೊಮ್ಯಾಟೊ ಟೀ ಶರ್ಟ್ ಧರಿಸಿ ಹಾಗೂ ಖಾಲಿ ಬ್ಯಾಗ್ಗನ್ನು ಹಾಕಿಕೊಂಡು ಫುಡ್ ಡೆಲಿವರಿಗಾಗಿ ಸ್ಟೈಲಿಶ್ ಬೈಕ್ನಲ್ಲಿ ಹೋಗುತ್ತಿರೋ ವಿಡಿಯೋ ಸಖತ್ ವೈರಲ್ ಆಗಿದೆ. ಈ ದೃಶ್ಯ ಕಂಡು ಬಂದಿದ್ದು ಮಧ್ಯಪ್ರದೇಶದ ಇಂದೋರ್ನಲ್ಲಿ.
ಅಷ್ಟಕ್ಕೂ ಇಷ್ಟು ಅಂದವಾದ ಯುವತಿ ಜೊಮ್ಯಾಟೊ ಬ್ಯಾಗ್ನೊಂದಿಗೆ ನೋಡಿದ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ. ಇನ್ನೂ ಈ ವಿಡಿಯೋವನ್ನು ನೋಡಿದ ಸಾಕಷ್ಟು ಮಂದಿ ಭಿನ್ನ ವಿಭಿನ್ನವಾಗಿ ಕಾಮೆಂಟ್ ಮಾಡಿದ್ದಾರೆ. ಇದು ಕಂಪನಿಯ ಮಾರ್ಕೆಟಿಂಗ್ ತಂತ್ರ, ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಹೀಗೆ ಮಾಡಿದ್ದಾರೆ, ಏನೇ ಆಗಲಿ ಮಹಿಳೆ ಹೆಲ್ಮೆಟ್ ಹಾಕಬೇಕಿತ್ತು ಎಂದು ಕಾಮೆಂಟ್ ಮಾಡುತ್ತಿದ್ದರು. ಆದರೆ ಈ ವಿಡಿಯೋ ಹಿಂದಿನ ಅಸಲಿ ಸಂಗತಿಯೇ ಬೇರೆಯದ್ದೇ ಇದೆ.
ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್ ಹೇಳಿದ್ದೇನು?
ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಜೊಮ್ಯಾಟೊ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಪಿಂದರ್ ಗೋಯಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆಗೂ ನಮಗೂ ಯಾವುದೇ ಸಂಬಂಧಿಸಿಲ್ಲ. ಆಹಾರ-ವಿತರಣಾ ವೇದಿಕೆಯು ಇಂದೋರ್ನಲ್ಲಿ ಮಾರ್ಕೆಟಿಂಗ್ ಮುಖ್ಯಸ್ಥರನ್ನು ಹೊಂದಿಲ್ಲ. ನಾವು ಹೆಲ್ಮೆಟ್ ಇಲ್ಲದೇ ಯಾವೊಬ್ಬ ಸದಸ್ಯರನ್ನು ಬೈಕ್ನಲ್ಲಿ ಕಳಿಸುವುದಿಲ್ಲ. ಅಲ್ಲದೆ, ನಮ್ಮಲ್ಲಿ “ಇಂದೋರ್ ಮಾರ್ಕೆಟಿಂಗ್ ಹೆಡ್” ಇಲ್ಲ. ಮಹಿಳೆಯರು ಆಹಾರವನ್ನು ವಿತರಿಸುವುದರಲ್ಲಿ ಯಾವುದೇ ತಪ್ಪಿಲ್ಲ. ತಮ್ಮ ತಮ್ಮ ಕುಟುಂಬಕ್ಕಾಗಿ ಪ್ರತಿದಿನ ಆಹಾರವನ್ನು ತಲುಪಿಸುವ ನೂರಾರು ಮಹಿಳೆಯರು ನಮ್ಮಲ್ಲಿದ್ದಾರೆ. ಮತ್ತು ಅವರ ಕೆಲಸದ ನೀತಿಯ ಬಗ್ಗೆ ನಾವು ಹೆಮ್ಮೆಪಡುತ್ತೇವೆ ಎಂದು ಸಾಮಾಜಿಕ ಜಾಲತಾಣವಾದ X ಖಾತೆಯಲ್ಲಿ ಬರೆದುಕೊಂಡಿದ್ದಾರೆ.

























