ಮೈದುನನ ಜೊತೆ ಮದುವೆಯಾಗಲು ಇಬ್ಬರು ಅತ್ತಿಗೆಯರ ಮಧ್ಯೆ ಮಾರಾಮಾರಿಯಾಗಿದೆ. ಇವರಿಬ್ಬರ ಜಗಳ ಬಿಡಿಸಲು ಊರಿಗೆ ಊರೇ ಬಂದಿದೆ.
ಬಿಹಾರದ ನಳಂದದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.
ಕೆಲ ದಿನಗಳ ಹಿಂದೆ ಈ ಯುವಕನ ಅಣ್ಣ ಸಾವನಪ್ಪಿದ್ದ. ಹೀಗಾಗಿ, ಮೈದುನನಿಗೆೆ ವಿಧವೆ ಅತ್ತಿಗೆ ಜೊತೆ ವಿವಾಹ ಮಾಡಬೇಕು ಅಂತ ಮಾತುಕತೆಯಾಗಿತ್ತು. ಆದರೇ ಯುವಕನಿಗಿದ್ದ ಆಸ್ತಿ ಮೇಲಿನ ಆಸೆಗೆ ಬಿದ್ದ ಮತ್ತೊಬ್ಬಳು ಅತ್ತಿಗೆ ಈ ಮೈದುನ ನನಗೆ ಬೇಕು ಅಂತ ಜಗಳವಾಡಿದ್ದಾಳೆ.
ಹೀಗಾಗಿ ಇಬ್ಬರು ಅತ್ತಿಗೆಯಂದಿರ ಮಧ್ಯೆ ಮಾತಿಗೆ ಮಾತು ಬೆಳೆದಿದ್ದು, ರಸ್ತೆಯಲ್ಲೇ ಬಡಿದಾಡಿಕೊಂಡಿದ್ದಾರೆ.