ಪುತ್ತೂರು : ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಅರಿಯಡ್ಕ ಗ್ರಾಮದ ಬೈರಮೂಲೆ ಎಂಬಲ್ಲಿ ನಡೆದಿದೆ.
ಬೈರಮೂಲೆ ಕನ್ನ ಪಾಟಾಳಿಯವರ ಪುತ್ರ ಶಿವಪ್ರಸಾದ್ (41) ಮೃತರು.

ಶಿವಪ್ರಸಾದ್ ರವರು ಮಿಷನ್ ಮೂಲಕ ಹುಲ್ಲು ತೆಗೆಯುವ ಕೆಲಸ ಮಾಡಿಕೊಂಡಿದ್ದು, ಅದರಂತೆ ಅ.21 ರಂದು ಸ್ಥಳೀಯ ಕುರಿಂಜ ಹೊಸಮನೆ ಚಂದ್ರಶೇಖರ ಮಣಿಯಾಣಿ ಎಂಬವರ ತೋಟಕ್ಕೆ ಹುಲ್ಲು ತೆಗೆಯಲು ಹೋಗಿದ್ದು, ಅದೇ ತೋಟದಲ್ಲಿದ್ದ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಶಿವಪ್ರಸಾದ್ ರವರು ಕೆಲಸ ಮುಗಿಸಿ ಕೈ ಕಾಲು ತೊಳೆಯಲು ಕೆರೆಗೆ ಇಳಿದಿದ್ದರು ಎನ್ನಲಾಗಿದ್ದು, ಈ ವೇಳೆ ಆಯ ತಪ್ಪಿ ಕೆರೆಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಠಾಣಾ ಎಸ್.ಐ ಧನಂಜಯ ಬಿ.ಸಿ ಹಾಗೂ ಸಿಬ್ಬಂದಿಗಳು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪುತ್ತೂರು ಅಗ್ನಿಶಾಮಕದಳದವರು ಮೃತದೇಹವನ್ನು ಕೆರೆಯಿಂದ ಮೇಲಕ್ಕೆತ್ತಿದ್ದಾರೆ.
ಮೃತರು ತಾಯಿ, ಪತ್ನಿ, ಪುತ್ರಿ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.



























