ವಿಟ್ಲ : ವ್ಯಕ್ತಿಯೋರ್ವನ ಮೇಲೆ ಯುವಕರ ತಂಡವೊಂದು ಹಲ್ಲೆ ನಡೆಸಿದ ಘಟನೆ ವಿಟ್ಲ-ಸಾಲೆತ್ತೂರು ರಸ್ತೆಯ ಕಡಂಬು ಎಂಬಲ್ಲಿ ನಡೆದಿದೆ.

ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಮಾದಕದ್ರವ್ಯ ಪ್ರಕರಣ ಸೇರಿದಂತೆ ಇನ್ನಿತರ ಅಪರಾಧ ಕೃತ್ಯಗಳಲ್ಲಿ ಗುರುತಿಸಿಕೊಂಡಿದ್ದ ಸಾಲೆತ್ತೂರು ಮೆದು ಸಿದ್ದೀಕ್ ಎಂಬಾತನ ಮೇಲೆ ಯುವಕರ ತಂಡವೊಂದು ಹಲ್ಲೆ ನಡೆಸಿದೆ ಎನ್ನಲಾಗಿದೆ.
ಆಟೋ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಬೆನ್ನಟ್ಟಿ ಬಂದ ತಂಡವೊಂದು ಆಟೋ ತಡೆದು ಚಾಲಕ ಸಿದ್ದೀಕ್ ಮೇಲೆ ಹಲ್ಲೆ ನಡೆಸಿ, ಆಟೋವನ್ನು ಜಖಂಗೊಳಿಸಿದೆ.,
ಸಿದ್ದಿಕ್ ಎಂಬಾತನನ್ನು ಪೊಲೀಸ್ ವಶಕ್ಕೆ ನೀಡಿದ್ದಾರೆ ಎಂದು ವರದಿಯಾಗಿದೆ.
ಪೂರ್ವದ್ವೇಷ ಹಿನ್ನೆಲೆ ಈ ಕೃತ್ಯವೆಸಲಾಗಿದೆ ಎನ್ನಲಾಗುತ್ತಿದೆ.
ಈ ಬಗ್ಗೆ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

























